NPS ತೊಲಗಲಿ, OPS ಬೆಳಗಲಿ. ಡಿಸೆಂಬರ್ 19 ಕ್ಕೆ ನಮ್ಮೆಲ್ಲರ ನಡೆ ಬೆಂಗಳೂರು ಕಡೆ. ಬೇಕೇ ಬೇಕು ಪಿಂಚಣಿ ಬೇಕು. ಸಾಕು ಸಾಕು NPS ಸಾಕು. ನಮ್ಮ ಹಾಗೂ ನಮ್ಮವರ ಭವಿಷ್ಯದ ಭದ್ರತೆಗಾಗಿ OPS ಬೇಕೇ ಬೇಕು

ಮಂಗಳವಾರ, ಸೆಪ್ಟೆಂಬರ್ 28, 2021

7th ವಿಜ್ಞಾನ ಪ್ರಶ್ನೋತ್ತರ.

 1. ಸಸ್ಯಗಳಲ್ಲಿ ಪೋಷಣೆ

ಅಭ್ಯಾಸಗಳು

1. ಜೀವಿಗಳು ಆಹಾರವನ್ನು ಏಕೆ ಸೇವಿಸಬೇಕು?

ಉ. ಜೀವಿಗಳು ಬದುಕಲು, ದೇಹದ ಬೆಳವಣಿಗೆಗೆ ಹಾಗೂ ಶಕ್ತಿಯನ್ನು ಪಡೆಯಲು ಆಹಾರವನ್ನು ಸೇವಿಸಬೇಕು.


2. ಪರಾವಲಂಬಿ ಮತ್ತು ಕೊಳೆತಿನಿ ಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ.

ಉ.

ಪರಾವಲಂಬಿಗಳು  : ಪರಾವಲಂಬಿಗಳು ಸಸ್ಯಗಳಿಂದ ಆಹಾರವನ್ನು ಪಡೆಯುತ್ತವೆ.  ಉದಾ: ಪ್ರಾಣಿಗಳು

ಕೊಳೆತಿನಿಗಳು: ಕೊಳೆತಿನಿಗಳು ಸತ್ತ ಮತ್ತು ಕೊಳೆಯುತ್ತಿರುವ ವಸ್ತುಗಳಿಂದ ಆಹಾರವನ್ನು ಪಡೆದುಕೊಳ್ಳುತ್ತವೆ. ಉದಾ: ಶೀಲಿಂದ್ರಗಳು


4.  ಹಸಿರು ಸಸ್ಯಗಳಲ್ಲಿ ಆಹಾರ ಸಂಸ್ಕರಣ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ ಕೊಡಿ.

. ಎಲೆಗಳು ಕ್ಲೋರೋಫಿಲ್ ಎಂಬ ಹಸಿರು ವರ್ಣಿಕೆ ಯನ್ನು ಹೊಂದಿರುತ್ತವೆ. ಸೂರ್ಯನ ಬೆಳಕಿನಲ್ಲಿ ಇರುವ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಅದು ಎಲೆಗಳಿಗೆ ಸಹಾಯವನ್ನು ಮಾಡುತ್ತದೆ. ಈ ಶಕ್ತಿಯು ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರಿನಿಂದ ಆಹಾರವನ್ನು ಸಂಶ್ಲೇಷಿಸಲು ಬಳಕೆಯಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಆಹಾರ ಸಂಶ್ಲೇಷಣೆ ನಡೆಯುತ್ತದೆ. ದ್ಯುತಿ ಸಂಶ್ಲೇಷಣ ಪ್ರಕ್ರಿಯೆ ನಡೆಯಲು ಕ್ಲೋರೋಫಿಲ್ , ಸೂರ್ಯನ ಬೆಳಕು,  ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಅವಶ್ಯಕ.


5. ಸಸ್ಯಗಳು ಆಹಾರ ಪ್ರಾಥಮಿಕ ಮೂಲಗಳು ಎಂಬುದನ್ನು ರೇಖಾಚಿತ್ರದ ಮೂಲಕ ತೋರಿಸಿ.




6. ಬಿಟ್ಟಸ್ಥಳ ತುಂಬಿ.

) ಎ). ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸುವುದರಿಂದ ಹಸಿರು ಸಸ್ಯಗಳನ್ನು............ ಎನ್ನುವರು.

 ಉ. ಸ್ವಪೋಷಕ


ಬಿ) ಸಸ್ಯಗಳಿಂದ ಸಂಶ್ಲೇಷಿಸಲ್ಪಟ್ಟ ಆಹಾರವು............ ರೂಪದಲ್ಲಿ ಸಂಗ್ರಹವಾಗುವುದು.

ಉ. ಪಿಷ್ಟ


ಸಿ). ದ್ಯುತಿ ಸಂಶ್ಲೇಷಣೆ ಯಲ್ಲಿ ಸೌರಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ............

ಉ. ಕ್ಲೋರೋಫಿಲ್ ( ಪತ್ರ ಹರಿತ್ತು)


ಡಿ.) ಸಸ್ಯಗಳು ದ್ಯುತಿ ಸಂಶ್ಲೇಷಣೆ ಯಲ್ಲಿ......... ಅನ್ನು ಒಳ ತೆಗೆದುಕೊಳ್ಳುತ್ತವೆ, ಮತ್ತು........... ಅನ್ನು ಬಿಡುಗಡೆ ಮಾಡುತ್ತವೆ.

ಉ. ಇಂಗಾಲದ ಡೈಆಕ್ಸೈಡ್ ------

      ಆಮ್ಲಜನಕ


7. . ಕೆಳಗಿನವುಗಳನ್ನು ಹೆಸರಿಸಿ.


I) ತೆಳುವಾದ ಕೊಳವೆಯಾಕಾರದ ಹಳದಿ ಬಣ್ಣದ ಕಾಂಡ ಬಂದಿರುವ ಪರಾವಲಂಬಿ ಸಸ್ಯ.

ಉ. ಕಸ್ಕ್ಯೂಟ


ii). ಭಾಗಶಃ ಸ್ವಪೋಷಿತ ಸಸ್ಯ

ಉ. ಕೀಟಾಹಾರಿ ಸಸ್ಯಗಳು


iii). ಎಲೆಗಳು ಅನಿಲ ವಿನಿಮಯ ನಡೆಸುವ ರಂದ್ರಗಳು.

ಉ. ಪತ್ರರಂದ್ರ


8. ಸರಿ ಉತ್ತರವನ್ನು ಗುರುತುಮಾಡಿ

ಎ. ಕಸ್ಕ್ಯೂಟ ಇದಕ್ಕೆ ಉದಾಹರಣೆ

ಉ. ಆತಿಥೇಯದ ಸಸ್ಯ.


ಬಿ. ಕೀಟಗಳನ್ನು ಹಿಡಿಯುವ ಮತ್ತು ತಿನ್ನುವ ಸಸ್ಯ

ಉ. ಹೂಜಿಗಿಡ


9. ಹೊಂದಿಸಿ ಬರೆಯಿರಿ.


       I.                                           II


ಕ್ಲೋರೋಫಿಲ್                       ಎಲೆ

ನೈಟ್ರೋಜನ್                        ಬ್ಯಾಕ್ಟೀರಿಯಾ

ಕಸ್ಕ್ಯೂಟ                             ಪರಾವಲಂಬಿ

ಪ್ರಾಣಿಗಳು                            ಪರಪೋಷಕಗಳು

ಕೀಟಗಳು                             ಹೂಜಿಗಿಡ


10. ಸರಿ , ತಪ್ಪು ಎಂದು ಗುರುತಿಸಿ

a. ದ್ಯುತಿ ಸಂಶ್ಲೇಷಣೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ .

ಉ.  ತಪ್ಪು


b. ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸಿಕೊಳ್ಳುವ ಸಸ್ಯಗಳನ್ನು ಕೊಳೆತಿನಿಗಳು ಎನ್ನುವರು.

ಉ. ತಪ್ಪು


c. ದ್ಯುತಿ ಸಂಶ್ಲೇಷಣೆ ಯು ಅನ್ನವು ಪ್ರೋಟೀನ್ ಅಲ್ಲ

ಉ. ಸರಿ


d. ಜ್ಯೋತಿ ಸಂಶ್ಲೇಷಣೆಯಲ್ಲಿ ಸೌರಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ

ಉ. ಸರಿ


11. ಸರಿ ಉತ್ತರ ಆರಿಸಿ ಬರೆಯಿರಿ


ದ್ಯುತಿ ಸಂಶ್ಲೇಷಣೆಗಾಗಿ ವಾತಾವರಣದಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಸಸ್ಯದ ಯಾವ ಭಾಗ ತೆಗೆದುಕೊಳ್ಳುತ್ತದೆ.

ಉ. ಬಿ.) ಪತ್ರರಂದ್ರಗಳು


12. ಕೆಳಗಿನವುಗಳನ್ನು ಸರಿ ಉತ್ತರ ಆರಿಸಿ

ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡ್ ಅನ್ನು ಸಸ್ಯಗಳು ವಾಗಿ ಇವುಗಳ ಮೂಲಕ ಒಳ ತೆಗೆದುಕೊಳ್ಳುತ್ತವೆ.

ಉ. ಎಲೆಗಳು


13. ಬಹಳಷ್ಟು ಹಣ್ಣು ಮತ್ತು ತರಕಾರಿ ಸಸ್ಯಗಳನ್ನು ರೈತರು ದೊಡ್ಡದಾದ ಹಸಿರುಮನೆಗಳಲ್ಲಿ ಏಕೆ ಬೆಳೆಯುತ್ತಾರೆ ? ಇದರಿಂದ ರೈತರಿಗೆ ಆಗುವ ಅನುಕೂಲಗಳೇನು ?

ಉ. ಹಸಿರುಮನೆಗಳು ಉತ್ತಮ ವಾತಾವರಣ ಒದಗಿಸುತ್ತವೆ.

ಅನಾನುಕೂಲ ವಾತಾವರಣದಿಂದ ರಕ್ಷಿಸುತ್ತದೆ.

ಪ್ರಾಣಿ ಪಕ್ಷಿಗಳು ಮತ್ತು ಕ್ರಿಮಿಕೀಟಗಳಿಂದ ರಕ್ಷಣೆ ಸಿಗುತ್ತದೆ.

ಹೆಚ್ಚಾದ ಮಳೆ ಗಾಳಿ ಬಿಸಿಲಿನಿಂದ ರಕ್ಷಣೆ ಸಿಗುತ್ತದೆ. ಎಲ್ಲ ಕಾರಣಗಳಿಂದ ರೈತರು ಹಸಿರುಮನೆಗಳಲ್ಲಿ ಹೆಚ್ಚು ಇಳುವರಿ ಪಡೆಯುತ್ತಾರೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ ವಿಡೀಯೋಗಳು

        ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ            YOU TUBE VIDEOS LINKS ಭಾಗ ೧ ವಿಡಿಯೊ ಭಾಗ ೨ ವಿಡಿಯೊ ಭಾಗ 3 ವಿಡಿಯೊ ಭಾಗ 4 ವಿಡಿಯೊ