NPS ತೊಲಗಲಿ, OPS ಬೆಳಗಲಿ. ಡಿಸೆಂಬರ್ 19 ಕ್ಕೆ ನಮ್ಮೆಲ್ಲರ ನಡೆ ಬೆಂಗಳೂರು ಕಡೆ. ಬೇಕೇ ಬೇಕು ಪಿಂಚಣಿ ಬೇಕು. ಸಾಕು ಸಾಕು NPS ಸಾಕು. ನಮ್ಮ ಹಾಗೂ ನಮ್ಮವರ ಭವಿಷ್ಯದ ಭದ್ರತೆಗಾಗಿ OPS ಬೇಕೇ ಬೇಕು

ಭಾನುವಾರ, ಸೆಪ್ಟೆಂಬರ್ 26, 2021

6th ವಿಜ್ಞಾನ, 6 ನಮ್ಮ ಸುತ್ತಲಿನ ಬದಲಾವಣೆಗಳು

 6. ನಮ್ಮ ಸುತ್ತಲಿನ ಬದಲಾವಣೆಗಳು

########### ಅಭ್ಯಾಸಗಳು ###########

1. ಜಲಾವೃತ ಪ್ರದೇಶದ ಮೂಲಕ ನಡೆಯುವಾಗ ಸಾಮಾನ್ಯವಾಗಿ ನಿಮ್ಮ ಉಡುಪನ್ನು ಮಡಚಿ ಚಿಕ್ಕದಾಗಿಸುವಿರಿ. ಈ ಬದಲಾವಣೆಯನ್ನು  ಪರಾವರ್ತ ಗೊಳಿಸಬಹುದೇ?

ಉ. ಹೌದು


2. ನಿಮಗೆ ಇಷ್ಟವಾದ ಆಟಿಕೆಯನ್ನು ನೀವು ಆಕಸ್ಮಿಕವಾಗಿ ಬೀಳಿಸಿ ಹೊಡೆದು ಹಾಕಿದಿರಿ. ಇದು ನೀವು ಬಯಸದ ಬದಲಾವಣೆ. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ?

ಉ. ಇಲ್ಲ.


3. ಕೆಲವು ಬದಲಾವಣೆಗಳನ್ನು ಕೋಷ್ಟಕದಲ್ಲಿ ಪಟ್ಟಿಮಾಡಲಾಗಿದೆ. ಪ್ರತಿ ಬದಲಾವಣೆಯು ಪರಾವರ್ತವೋ, ಅಲ್ಲವೋ ಎಂಬುದನ್ನು ಬರೆಯಿರಿ

   ಬದಲಾವಣೆ                   ಪರಾವರ್ತ ಗೊಳಿಸಬಹುದೇ?


೧. ಮರದ ತುಂಡನ್ನು ಕತ್ತರಿಸುವುದು-----         ಇಲ್ಲ

೨. ಐಸ್ ಕ್ಯಾಂಡಿ ಕರಗುವಿಕೆ --------------          ಇಲ್ಲ

೩. ನೀರಿನಲ್ಲಿ ಸಕ್ಕರೆಯನ್ನು ಕರಗಿಸುವುದು--     ಇಲ್ಲ

೪. ಆಹಾರವನ್ನು ಬೇಯಿಸುವುದು.---------       ಇಲ್ಲ

೫. ಮಾವಿನಕಾಯಿ ಹಣ್ಣಾಗುವುದು.--------       ಇಲ್ಲ

೬. ಹಾಲು ಮೊಸರಾಗುವುದು--------------          ಇಲ್ಲ.


4. ಡ್ರಾಯಿಂಗ್ ಹಾಳೆಯ ಮೇಲೆ ನೀವು ಚಿತ್ರವನ್ನು ಬಿಡಿಸಿದಾಗ ಆ ಹಾಳೆಯು ಬದಲಾವಣೆಯಾಗುತ್ತದೆ.

ನೀವು ಈ ಬದಲಾವಣೆಯನ್ನು ಪರಾವರ್ತಗೊಳಿಬಹುದೇ?

ಉ. ಇಲ್ಲ.


5. ಪರಾವರ್ತಗೊಳಿಸಬಹುದಾದ ಮತ್ತು ಪರಾವರ್ತಗೊಳಿಸಲಾಗದ ಬದಲಾವಣೆಗಳ ನಡುವಿನ ವ್ಯತ್ಯಾಸಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ.

ಉ. 

* ನೀರಿಗೆ ತಂಪು ನೀಡಿದಾಗ ಮಂಜು ಗಡ್ಡೆಯಾಗುತ್ತದೆ.

ಅದೇ ಮಂಜುಗಡ್ಡೆ ಗೆ ಶಾಖ ನೀಡಿದಾಗ ನೀರಾಗುತ್ತದೆ.


* ಹಾಲಿನಿಂದ ತಯಾರಾಗುತ್ತದೆ. ಆದರೆ ಮೊಸರಿನಿಂದ ಹಾಲು ಮಾಡಲು ಬರುವುದಿಲ್ಲ.

ಕೆಲವು ವಸ್ತುಗಳನ್ನು ಪರಾವರ್ತ ಗೊಳಿಸಬಹುದು ಮತ್ತು ಕೆಲವು ವಸ್ತುಗಳನ್ನು ಪರಿವರ್ತಿಸಲು ಬರುವುದಿಲ್ಲ.

ನೀರಿಗೆ ತಂಪು ನೀಡಿ ಮಂಜುಗಡ್ಡೆ ಮಾಡಿ ಶಾಖದಿಂದ ಪುನಃ ನೀರನ್ನು ಪಡೆಯಬಹುದು. ಆದರೆ ಹಾಲಿನಿಂದ ಮೊಸರು ಮಾಡಿ ಪುನಃ ಹಾಲು ಪಡೆಯಲು ಬರುವುದಿಲ್ಲ.


6. ಮುರಿದ ಮೂಳೆಯ ಮೇಲೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನ(pop) ದಪ್ಪ ಪದರವನ್ನು ಲೇಪಿಸಲಾಗಿದೆ. ಒಣಗಿದಾಗ ಅದು ಗಟ್ಟಿಯಾಗಿ ಮುರಿದ ಮೂಳೆ ಅಲುಗಾಡದಂತೆ ಮಾಡುತ್ತದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ನಲ್ಲಿ ಆದ ಬದಲಾವಣೆಯನ್ನು ಪರಾವರ್ತ ಗೊಳಿಸಬಹುದೆ?

ಉ. ಇಲ್ಲ


7. ತೆರೆದ ಸ್ಥಳದಲ್ಲಿರುವ ಒಂದು ಸಿಮೆಂಟಿನ ಚೀಲವು ರಾತ್ರಿ ಸುರಿದ ಮಳೆಯಿಂದ ಒದ್ದೆಯಾಗುತ್ತದೆ. ಮರುದಿನ ಆ ಸೂರ್ಯನು ಪ್ರಕಾರವಾಗಿ ಹೊಳೆಯುತ್ತಾನೆ. ಸಿಮೆಂಟಿನಲ್ಲಿ ಆದ ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಎಂದು ನೀವು ಯೋಚಿಸುವಿರಾ?

ಉ. ಸಿಮೆಂಟ್ ನಲ್ಲಿ ಆದ ಬದಲಾವಣೆಯನ್ನು ಪರಾವರ್ತ ಗೊಳಿಸಲು ಬರುವುದಿಲ್ಲ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ ವಿಡೀಯೋಗಳು

        ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ            YOU TUBE VIDEOS LINKS ಭಾಗ ೧ ವಿಡಿಯೊ ಭಾಗ ೨ ವಿಡಿಯೊ ಭಾಗ 3 ವಿಡಿಯೊ ಭಾಗ 4 ವಿಡಿಯೊ