EDUCATION FOR ALL

Recent

6th ವಿಜ್ಞಾನ .1.ನಮಗೆ ಆಹಾರ ಎಲ್ಲಿಂದ ದೊರೆಯುತ್ತದೆ. ಪ್ರಶ್ನೋತ್ತರ

6th - ವಿಜ್ಞಾನ - ಅಧ್ಯಾಯ ೧ ಆಹಾರ - ಇದು ಎಲ್ಲಿಂದ ದೊರಕುತ್ತದೆ ? - ಪ್ರಶ್ನೋತ್ತರಗಳು


ಆಹಾರ - ಇದು ಎಲ್ಲಿಂದ ದೊರಕುತ್ತದೆ? 


 ~~~ : ಅಭ್ಯಾಸಗಳು :~~~


 ಪ್ರಶ್ನೆ1) ಎಲ್ಲಾ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯ ಎಂದು ನೀನು ತಿಳಿದಿರುವಿರಾ ?

ಉತ್ತರ :-  ಇಲ್ಲ.  ಎಲ್ಲಾ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯವಿರುವುದಿಲ್ಲ.  ಜೀವಿಗಳು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ವೈವಿಧ್ಯತೆ ಇದೆ ಎಂಬುದನ್ನು ನಾವು ನೋಡಬಹುದು.


ಪ್ರಶ್ನೆ ೨)  :- ನಾವು ತಿನ್ನುವ ಐದು ಸಸ್ಯಗಳು ಮತ್ತು ತಿನ್ನುವ ಅವುಗಳ ಭಾಗಗಳನ್ನು ಹೆಸರಿಸಿ 

ಉತ್ತರ :- 

    (೧) ಬದನೆಕಾಯಿ ಗಿಡ - ಬದನೆಕಾಯಿ (ಕಾಯಿ)

     (೨) ಬಾಳೆ ಹಣ್ಣಿನ ಗಿಡ -  ಬಾಳೆಹಣ್ಣು (ಹಣ್ಣು )

     (೩) ಸೇಬಿನ ಮರ - ಸೇಬು ಹಣ್ಣು (ಕಾಯಿ & ಹಣ್ಣು )

     (೪) ಪಾಲಕ್ ಸಸ್ಯ - ಪಾಲಕ್ ಎಲೆ ( ಎಲೆ )

     (೫) ಶೇಂಗಾ ಗಿಡ. -  ಶೇಂಗಾ ಬೀಜ (ಬೀಜ )

ಪ್ರಶ್ನೆ ೪ :-  ಕೊಟ್ಟಿರುವ ಪದಗಳನ್ನು ತುಂಬಿ

( ಸಸ್ಯಹಾರಿ, ಸಸ್ಯ, ಹಾಲು , ಕಬ್ಬು ,  ಮಾಂಸಹಾರಿ )


ಎ) ಹುಲಿಯು  ಮಾಂಸಾಹಾರಿ ಏಕೆಂದರೆ ಇದು ಮಾಂಸವನ್ನು ಮಾತ್ರ ತಿನ್ನುತ್ತದೆ.


ಬಿ) ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ . ಆದ್ದರಿಂದ ಇದು ಸಸ್ಯಾಹಾರಿ


ಸಿ)  ಗಿಳಿಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ .


ಡಿ )ಹಸುಗಳು ಹೆಮ್ಮೆಗಳು ಮತ್ತು ಮೇಕೆ ಗಳಿಂದ ದೊರೆತ ನಾವು ಕುಡಿಯುವ ಒಂದು ಪ್ರಾಣಿಜನ್ಯ ಉತ್ಪನ್ನ ಹಾಲು 


ಇ) ನಮಗೆ ಸಕ್ಕರೆಯು ದೊರೆಯುವ ಮೂಲ ಕಬ್ಬು


ಹೆಚ್ಚುವರಿ ಪ್ರಶ್ನೆಗಳು 


೧) ನಮ್ಮ ಆಹಾರದ ಮುಖ್ಯ ಮೂಲಗಳು ಯಾವವು 

ಉತ್ತರ :-  ನಮ್ಮ ಆಹಾರದ ಮುಖ್ಯ ಮೂಲಗಳು ಪ್ರಾಣಿಗಳು ಮತ್ತು ಸಸ್ಯಗಳು 


೨) ಸಸ್ಯಹಾರಿಗಳು ಎಂದರೇನು ?

ಉತ್ತರ :-  ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಸಸ್ಯಹಾರಿಗಳು ಎನ್ನುವರು 


೩) ಮಾಂಸಾಹಾರಿಗಳು ಎಂದರೇನು ? 

ಉತ್ತರ :-  ಪ್ರಾಣಿಗಳನ್ನು ತಿನ್ನುವ ಪ್ರಾಣಿಗಳನ್ನು ಮಾಂಸಾಹಾರಿಗಳು ಎಂದು ಕರೆಯುತ್ತಾರೆ 


೪) ಮಿಶ್ರಾಹಾರಿಗಳು ಎಂದರೇನು ?

 ಉತ್ತರ :-ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ತಿನ್ನುವ ಪ್ರಾಣಿಗಳನ್ನು ಮಾಂಸಹಾರಿಗಳು ಎನ್ನುವರು.

ಕಾಮೆಂಟ್‌ಗಳಿಲ್ಲ

ಸಚೇತನ. 16/01/2026