NPS ತೊಲಗಲಿ, OPS ಬೆಳಗಲಿ. ಡಿಸೆಂಬರ್ 19 ಕ್ಕೆ ನಮ್ಮೆಲ್ಲರ ನಡೆ ಬೆಂಗಳೂರು ಕಡೆ. ಬೇಕೇ ಬೇಕು ಪಿಂಚಣಿ ಬೇಕು. ಸಾಕು ಸಾಕು NPS ಸಾಕು. ನಮ್ಮ ಹಾಗೂ ನಮ್ಮವರ ಭವಿಷ್ಯದ ಭದ್ರತೆಗಾಗಿ OPS ಬೇಕೇ ಬೇಕು

ಗುರುವಾರ, ಆಗಸ್ಟ್ 20, 2020

ಸರಕಾರಿ ನೌಕರರು ತಿಳಿದಿರಬೇಕಾದ KCSR ನಿಯಮಗಳು

ಸರಕಾರಿ ನೌಕರರು, ಅವಶ್ಯವಾಗಿ ತಿಳಿಯಬೇಕಾದ ವಿಚಾರಗಳು
----------------------------------
 
  ಸರ್ಕಾರಿ  ನೌಕರ  GPF , KGID , LIC , FBF , KGIS , DCRG  , Family pension , ಅಲ್ಲದೆ   SB a/c , ಮತ್ತು  FD a/c ಇತ್ಯಾದಿಗಳಿಗೆ ಎಲ್ಲದಕ್ಕೂ  ನಾಮನಿರ್ದೇಶನ( Nominee ) ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ . 
ಕೇವಲ ನಾಮನಿರ್ದೇಶನ  ಮಾಡಿದರೆ  ಸಾಲದು , ಅದನ್ನು  ಸಂದರ್ಭಾನುಸಾರ  Update  ಮಾಡುತ್ತಾ ಇರಬೇಕು .
  ನಾಮನಿರ್ದೇಶನಗಳನ್ನು  ಒಬ್ಬರ  ಹೆಸರಿನಲ್ಲಿಯೇ  ಮಾಡಬೇಕೆಂದೇನೂ
ಇಲ್ಲ . ಒಬ್ಬನಿಗಿಂತ  ಹೆಚ್ಚಿನ ವ್ಯಕ್ತಿಗಳನ್ನು  ನಾಮನಿರ್ದೇಶಿತರನ್ನಾಗಿ 
ಮಾಡಬಹುದು . ಹೆಚ್ಚಿನ  ವ್ಯಕ್ತಿಗಳನ್ನು ಮಾಡುವಾಗ  ತಾನು  ಮೃತಪಟ್ಟಲ್ಲಿ 
ಯಾವ ವ್ಯಕ್ತಿಗಳಿಗೆ  ಎಷ್ಟೆಷ್ಟು  ಪಾಲು ಹಣ ಕೊಡಬೇಕು  ಎಂಬುದನ್ನು ಕೂಡ  ದಾಖಲಿಸಬೇಕು. 

ನೌಕರನ  ಕೇಂದ್ರಸ್ಥಾನ
_____________________
KCSR ನಿಯಮ 513 ರ  ಪ್ರಕಾರ  ಕೇಂದ್ರ ಸ್ಥಾನ   ಎಂದರೆ   ತಾನು  ಕರ್ತವ್ಯ  ನಿರ್ವಹಿಸುವ  ಕಾರ್ಯಸ್ಥಳದಿಂದ  8 ಕಿ.ಮೀ. ದೂರವನ್ನು   ಕೇಂದ್ರ ಸ್ಥಾನ ವೆಂದು   ಕರೆಯುವರು .
8 ಕಿ. ಮೀ . ಮೀರಿ  ಬೆಳೆಸಿದ  ಪ್ರಯಾಣಕ್ಕೆ  ಪ್ರಯಾಣ ಭತ್ಯೆ  ಪಡೆಯಬಹುದು .
ಪ್ರವಾಸದ  ಕಾಲದಲ್ಲಿ  ಕೇಂದ್ರಸ್ಥಾನ ದಿಂದ 8 ಕಿ. ಮೀ .ಒಳಗೆ  ತಂಗುವುದನ್ನು  ಕೇಂದ್ರಸ್ಥಾನದಲ್ಲಿ   ತಂಗುವುದಾಗಿ ಭಾವಿಸಬೇಕು .
ದಿನದ 24 ಗಂಟೆಯೂ  ಸರ್ಕಾರಿ ನೌಕರ *

-------------------------------
K C S R ನಿಯಮಾವಳಿಯ  ನಿಯಮ  26( ಎ ) ಪ್ರಕಾರ  ಸರ್ಕಾರಿ ನೌಕರನು  ದಿನವಿಡಿ  ಅಂದರೆ 24 ಗಂಟೆಯೂ ಆತನಿಗೆ  ಸಂಬಳ ನೀಡುತ್ತಿರುವ  ಸರ್ಕಾರದ  ಕರ್ತವ್ಯಕ್ಕಾಗಿಯೇ  ಇರಬೇಕಾಗುತ್ತದೆ .

ಸರ್ಕಾರ  ರಜಾ ದಿನದಂದು  ಕರ್ತವ್ಯ ನಿರ್ವಹಿಸಲು  ಆದೇಶಿಸಿದರೆ
ಅದನ್ನು  ತಿರಸ್ಕರಿಸಲು  ಬರುವುದಿಲ್ಲ . ಉದಾಹರಣೆಗೆ  ಒಬ್ಬ  ವ್ಯಕ್ತಿಯು ಸಂಜೆ 5-30 ಕ್ಕೆ  ವಯೋ ನಿವೃತ್ತಿ  ಹೊಂದಿ ,  ಅದೇ ದಿನ ರಾತ್ರಿ   11-30ಕ್ಕೆ 
ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ  ನಿಯಮ 8 ( 14 )ರ ಪ್ರಕಾರ  ದಿನ ಎಂದರೆ  ಮಧ್ಯರಾತ್ರಿಯಲ್ಲಿ   ಆರಂಭಗೊಳ್ಳುತ್ತದೆ 
ಮತ್ತು  ಕೊನೆಗೊಳ್ಳುತ್ತದೆ . 
ಏಕೆಂದರೆ , X  ಎಂಬ ನೌಕರ  ದಿನಾಂಕ 30- 09 - 1993 ರಂದು   ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ ರಾತ್ರಿ  10-30 ಕ್ಕೆ ನಿಧನರಾದರು . ಈ 
KAT ಯು  ಅರ್ಜಿ ಸಂಖ್ಯೆ  : 3452 ,98 ರ  ದಿನಾಂಕ 03-09-1998 ರಂದು ಈ ವ್ಯಕ್ತಿಯು ಸೇವಾವಧಿಯಲ್ಲಿ     ಮೃತಪಟ್ಟಿರುವುದರಿಂದ 
ರಾಜ್ಯ ಸರ್ಕಾರಿ ನೌಕರರ ಸಮೂಹ ವಿಮಾ ಯೋಜನೆ  ನಿಯಮಗಳು 
1981 ರ ನಿಯಮ  21(2) ರ ಪ್ರಕಾರ 3 ತಿಂಗಳ ಅವಧಿಯೊಳಗೆ 
ಸಮೂಹ ವಿಮಾ ಹಣವನ್ನು ಪಾವತಿಸಲು  ಆದೇಶಿಸಿದೆ . Exemption on professional  Tax
ವೃತ್ತಿ  ತೆರಿಗೆಯಿಂದ  ವಿನಾಯತಿ
~~~~~~~~~~~~~
ಸರ್ಕಾರದ   ಅಧಿಸೂಚನೆ  ಸಂಖ್ಯೆ  ಎಫ್.ಡಿ. 12 
ಸಿ.ಪಿ.ಟಿ.94( ¡¡¡ )ದಿನಾಂಕ  30 - 2 - 1994 ರ  ಪ್ರಕಾರ
ಒಂದೇ  ಮಗುವಿದ್ದು  ಸಂತಾನಹರಣ   ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ   ( ದಂಪತಿಗಳ  ಪೈಕಿ  ಒಬ್ಬರಲ್ಲಿ )  ದಿನಾಂಕ  01 - 04 - 1994  ರಿಂದ  ವೃತ್ತಿ  ತೆರಿಗೆ  ವಿನಾಯತಿ ನೀಡಲಾಗಿದೆ .
 ಮಹಿಳಾ  ನೌಕರರಿಗೆ  *
------------------------------------
  ಮಹಿಳಾ ನೌಕರರು   ಮದುವೆಯಾಗಿ   ಗಂಡನ ಮನೆಯಲ್ಲಿ  
ವಾಸವಾಗಿದ್ದರೂ  ಸಹ  ಮಹಿಳಾ  ನೌಕರರ  ತಂದೆ - ತಾಯಿ ಈ ನೌಕರರ
ಅವಲಂಬಿತರಾಗಿದ್ದಲ್ಲಿ  ಸರ್ಕಾರದ  ಅಧಿಸೂಚನೆ  ಸಂಖ್ಯೆ ಸಿ.ಆ.ಸು.ಇ.
26/ ಎಸ್ . ಎಂ . ಆರ್ 2011 ದಿನಾಂಕ 27- 03- 2012 ರಂತೆ ಪೋಷಕರ  ಮಾಸಿಕ  ಆದಾಯ 6000/- ರೂ  ಮೀರದಿದ್ದರೆ  ಅಂತವರು ವೈದ್ಯಕೀಯ ಮರುವೆಚ್ಛ  ಪಾವತಿ ಮಾಡಿಕೊಳ್ಳುವ ಅವಕಾಶವಿದೆ.
 ಅಸಾಧಾರಣ ರಜೆ ( Extraordinary Leave )
_________________

ಸರ್ಕಾರಿ  ನೌಕರನು ಅವನ  ಹಕ್ಕಿನಲ್ಲಿ  ಯಾವುದೇ  ವಿಧವಾದ  ರಜೆ  ಇಲ್ಲದಿದ್ದಾಗ , ಅಥವಾ  ವಿಶೇಷ ಸನ್ನಿವೇಶಗಳಲ್ಲಿ  KCSR  ನಿಯಮ  117 ( ಎ ) ರ ಪ್ರಕಾರ  ಅಸಾಧಾರಣ  ರಜೆಯನ್ನು  ಪಡೆಯಬಹುದಾಗಿರುತ್ತದೆ . 
        ಆದರೆ  ಈ  ಅಸಾಧಾರಣ  ರಜೆಯ  ಅವಧಿಗೆ  ಯಾವುದೇ  ವೇತನ  ಭತ್ಯೆಗಳು  ಲಭ್ಯವಾಗುವುದಿಲ್ಲ .

   ಯಾವುದೇ  ರಜೆ  ಇಲ್ಲದ  ನೌಕರರು  ಕ್ಯಾನ್ಸರ್  ,  ಕುಷ್ಠ  ,  ಕ್ಷಯ ,  ಮಾನಸಿಕ  ಅಸ್ವಸ್ಥತೆ   ಇತ್ಯಾದಿ  ಮಾರಕ  ಖಾಯಿಲೆಗಳಿಗೆ   ತುತ್ತಾದಲ್ಲಿ   ವೈದ್ಯಕೀಯ 
ಪ್ರಮಾಣಪತ್ರದ  ಆಧಾರದ  ಮೇಲೆ  18 ತಿಂಗಳ  ಅವಧಿಗೆ  ಅಸಾಧಾರಣ  ರಜೆ  ಮಂಜೂರು ಮಾಡಲು ಅವಕಾಶವಿದೆ .
KCSR  ನಿಯಮ 117 ( ಬಿ )( ¡¡¡ ) ರ  ಪ್ರಕಾರ  ಸತತ ಮೂರು  ವರ್ಷ  ಸೇವೆ  ಸಲ್ಲಿಸಿದ  ನೌಕರರಿಗೆ  ಉನ್ನತ ವ್ಯಾಸಂಗಕ್ಕೆ  2 ವರ್ಷ , ಡಾಕ್ಟರೇಟ್  ಕೋರ್ಸ್ ಗಾಗಿ 3 ವರ್ಷಅಸಾಧಾರಣ  ರಜೆ  ಪಡೆಯಲು ಅವಕಾಶವಿದೆ .ರಿಮೂವಲ್ -  ಡಿಸ್ಮಿಸಲ್ ಗೂ  ಇರುವ  ವ್ಯತ್ಯಾಸ  ? ?
_____________________
ರಿಮೂವಲ್ ( ಕೆಲಸದಿಂದ  ತೆಗೆದುಹಾಕುವುದು).  ಯಾವುದೇ  ಆರ್ಥಿಕ ಸೌಲಭ್ಯವೂ  ದೊರೆಯುವುದಿಲ್ಲ , ಆದರೆ  ಮತ್ತೊಂದು  ಹುದ್ದೆಗೆ 
ಆಯ್ಕೆಯಾಗಬಹುದು .
ಆದರೆ  ಡಿಸ್ಮಿಸಲ್ ( ಕೆಲಸದಿಂದ  ವಜಾ ಮಾಡುವುದು ) . ಈ ಆದೇಶವಾದಾಗ  ಆರ್ಥಿಕ  ಸೌಲಭ್ಯವೂ  ಸಿಗುವುದಿಲ್ಲ , ಹಾಗು  ಬೇರೆ ಹುದ್ದೆಗೆ 
ನೇಮಕಾತಿಯು  ಸಿಗುವುದಿಲ್ಲ .ಅಮಾನತ್ತು  ( Suspension )
____________________
1)ಒಬ್ಬ ನೌಕರರನ್ನು  ಅಮಾನತ್ತು ಮಾಡುವಾಗ ಮುಂಚಿತವಾಗಿ ನೋಟೀಸು ಕೊಡಬೇಕೆಂದು ನಿಯಮವಿಲ್ಲ .
2) ಅಮಾನತ್ತು ಅವಧಿಯಲ್ಲಿ ಕಡ್ಡಾಯವಾಗಿ ಶೇಕಡಾ 50% ಜೀವನಾಧಾರ ಭತ್ಯೆ  ಕೊಡಬೇಕು .
3) ಅಮಾನತ್ತನ್ನು  ಗರಿಷ್ಠ 6 ತಿಂಗಳೊಳಗಾಗಿ  ಅಂತಿಮ  ಆದೇಶ ಹೊರಡಿಸಬೇಕು . ಮುಂದುವರಿಸಬೇಕಾದರೆ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು .
4) ಯಾವುದಾದರೂ  ಕಾರಣದಿಂದ 48 ಗಂಟೆ ಮೀರಿದ  ಅವಧಿಯವರಿಗೆ ಅಭಿರಕ್ಷೆಯಲ್ಲಿ  ( ಪೋಲಿಸ್ ಕಷ್ಟಡಿ ) ತಡೆಹಿಡಿದಿದ್ದರೆ  ಸ್ವಯಂಚಾಲಿತವಾಗಿ  ಅಮಾನತ್ತು ಜಾರಿಯಾಗುತ್ತದೆ .
5)  ವಿಚಾರಣೆ  ಬಾಕಿ ಇರುವಾಗ ನೌಕರರನನ್ನು  ಅಮಾನತ್ತುಗೊಳಿಸಬಹುದು. ಆದರೆ,  ಅಮಾನತ್ತು ದಂಡನೆ  ಅಲ್ಲ.
6) ತಿಂಗಳಿಗೂ  ಮೀರಿದ ಅವಧಿಗೆ  ಅಮಾನತ್ತು ಮುಂದುವರಿದ ಪ್ರಕರಣಕ್ಕೆ ಶೇಕಡಾ 75% ,  ಹಾಗು ವರ್ಷಕ್ಕೂ  ಮೀರಿದ ಅವಧಿಗೆ  ಶೇ100% ರಷ್ಟು ಸಂಬಳ ಪಾವತಿಸಬೇಕು .
7) ಅಮಾನತ್ತಾದ  ನೌಕರ  ವಿಚಾರಣೆಯಿಂದ  ಆರೋಪ ಮುಕ್ತನಾದಲ್ಲಿ  ಪೂರ್ಣ  ವೇತನ  ನೀಡಬೇಕು .
8 ) ಅಮಾನತ್ತು ನಂತರ ಶಿಸ್ತು ನಡವಳಿಕೆ  ನಡೆಸದಿದ್ದಲ್ಲಿ  ಅದು  ನ್ಯಾಯಸಮ್ಮತವಲ್ಲ .
9 ) ಲಘು ದಂಡನೆ  ವಿಧಿಸುವುದೊಂದಿಗೆ  ಅಮಾನತ್ತು ಅವಧಿ ಕೊನೆಗೊಂಡಾಗ ಈ ಅವಧಿಗೆ  ಪೂರ್ಣ ವೇತನ  ಮತ್ತು ಭತ್ಯೆಗಳನ್ನು ಕೊಡಬೇಕು .
10 ) ' ಬಿ ' ಗುಂಪಿನ  ಅಧಿಕಾರಿಗಳನ್ನು  ಅಮಾನತ್ತುಗೊಳಿಸುವ  ಅಧಿಕಾರ - ಜಿಲ್ಲಾಧಿಕಾರಿ  ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ  ಅಧಿಕಾರ ಇರುತ್ತದೆ .

ಶುಕ್ರವಾರ, ಆಗಸ್ಟ್ 7, 2020

ಶಾಲಾ ನಿರ್ವಹಣಾ ಕೈಪಿಡಿ

COVID-19  ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಶಾಲಾ ನಿರ್ವಹಣಾ ಕೈಪಿಡಿ

ಸುಗಮ್ಯ ಶಿಕ್ಷಾ ಕಾರ್ಯಕ್ರಮ

https://drive.google.com/file/d/1aipPgvludTNQExUu0SKEKAFhuYOgDJ1i/view?usp=drivesdk


ಕಂಪ್ಯೂಟರ್ ಶಿಕ್ಷಣ

ಕಂಪ್ಯೂಟರ್ ಶಿಕ್ಷಣ


ಬುಧವಾರ, ಆಗಸ್ಟ್ 5, 2020

ಜ್ಯೋತಿ ಸಂಜೀವಿನಿ ಸಂಪೂರ್ಣ ಮಾಹಿತಿ

>>> ಜ್ಯೋತಿ ಸಂಜೀವಿನಿ ಕುರಿತು ಸರ್ಕಾರದ ನಡಾವಳಿಗಳು - ಸಂಪೂರ್ಣ ಮಾಹಿತಿ 👈👈

>>>ಜ್ಯೋತಿ ಸಂಜೀವಿನಿ ಪ್ಯಾಕೇಜ್ ಕುರಿತು ಮಾಹಿತಿ 👈👈

>>> ಜ್ಯೋತಿ ಸಂಜೀವಿನಿ - ಆಸ್ಪತ್ರೆಗಳು 👈👈

>>> Govt recognised Hospitals & Diagnostic centres for medical reimbursement 👈👈


>>> 
ವೈದ್ಯಕೀಯ ವೆಚ್ಚ ಮರುಪಾವತಿಗೆ ಕೋರುವ ನಮೂನೆಗಳು




*"ಜ್ಯೋತಿ ಸಂಜೀವಿನಿ ಯೋಜನೆ-
Cashless Medical Treatment"*

HRMS ನಲ್ಲಿ ,
(೧) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ.
-

(೨) ಜ್ಯೋತಿ ಸಂಜೀವಿನಿ ಯೋಜನೆಯು ಕೇವಲ 7 ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದೆ
1. ಹೃದ್ರೋಗ
2. ಕ್ಯಾನ್ಸರ್
3. ನರ ರೋಗ
4. ಯುರಿನರಿ (ಕಿಡ್ನಿ)
5. ಸುಟ್ಟ ಗಾಯ
6. ಅಪಘಾತ
7. ಶಿಶುಗಳ ಶಸ್ತ್ರಚಿಕಿತ್ಸೆ.

(೩) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.

*ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು..?*
ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ,

(೧) ಆ ಆಸ್ಪತ್ರೆಯು 'ಜ್ಯೋತಿ ಸಂಜೀವಿನಿ ಯೋಜನೆ' ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ
(ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲಾಗುತ್ತಿರುತ್ತದೆ)

(೨) ನಿಮ್ಮ ಖಾಯಿಲೆಯು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಬರುತ್ತದೆಯೇ, ಇಲ್ಲವೇ ಎಂದು ADMIN/ ವೈದ್ಯರಿಂದ ಖಚಿತಪಡಿಸಿಕೊಳ್ಳಿ

(೩) ADMIN ರಲ್ಲಿ ನೀವು ಸರ್ಕಾರಿ ನೌಕರರೆಂದು ಪರಿಚಯಿಸಿಕೊಂಡು, ನಿಮ್ಮ ಮೊದಲ KGID ನಂ. ನೀಡಿ

(೪) ಆ ಆಸ್ಪತ್ರೆಯ E-MAIL ID ಪಡೆದು, ನಿಮ್ಮ HRMS SALARY CERTIFICATE & HRMS DETAILS ಆ ಆಸ್ಪತ್ರೆಯ E-MAIL ID ಗೆ ಇ-ಮೇಲ್ ಮಾಡಲು ನಿಮ್ಮ CLERK/ CASE WORKER ರಲ್ಲಿ ವಿನಂತಿಸಿಕೊಳ್ಳಿ.
(ಅಥವಾ ನಿಮ್ಮ HRMS SALARY SLIP & HRMS DETAILS print out ನಿಮ್ಮ ಬಳಿ ಇದ್ದಲ್ಲಿ ಆಸ್ಪತ್ರೆಗೆ ನೀಡಿ)

(೫) ರೋಗಿಯ VOTER ID ಅಥವಾ AADHAAR CARD ಅಥವಾ DL Zerox Copy ಆಸ್ಪತ್ರೆಗೆ ನೀಡಿ.

*ಸೂಚನೆ:*
ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಒಂದು ರೂಪಾಯಿ ಕೂಡ ಖರ್ಚು ಆಗದು, ಇದು ಸಂಪೂರ್ಣ ಉಚಿತ..
ಇದು ರಾಜ್ಯ ಸರ್ಕಾರದ ಅದ್ಭುತವಾದ & ಅತ್ಯುತ್ತಮವಾದ ಯೋಜನೆ.

ಈ ರೀತಿಯಲ್ಲಿ *ಜ್ಯೋತಿ ಸಂಜೀವಿನಿ* ಯೋಜನೆಯ ಪ್ರಯೋಜನ ಪಡೆಯಬಹುದು

ದಿನಪತ್ರಿಕೆಗಳು

ಇಂದಿನ ದಿನಪತ್ರಿಕೆಗಳು


>> ಸಂಯುಕ್ತ ಕರ್ನಾಟಕ ದಿನಪತ್ರಿಕೆ

>>ವಿಜಯವಾಣಿ ದಿನಪತ್ರಿಕೆ

>> ಪ್ರಜಾವಾಣಿ ದಿನಪತ್ರಿಕೆ

>> ವಿಶ್ವ ವಾಣಿ ದಿನಪತ್ರಿಕೆ

>> ವಿಜಯ ಕರ್ನಾಟಕ ದಿನಪತ್ರಿಕೆ

>> ಕನ್ನಡ ಪ್ರಭ ದಿನಪತ್ರಿಕೆ

>> ಹೊಸ ದಿಗಂತ ದಿನಪತ್ರಿಕೆ

>> ಉದಯವಾಣಿ ದಿನಪತ್ರಿಕೆ

>> ಲೋಕ ದರ್ಶನ ದಿನಪತ್ರಿಕೆ

>> ಕನ್ನಡಮ್ಮ ದಿನಪತ್ರಿಕೆ

>> ವಾರ್ತಾ ಭಾರತಿ ದಿನಪತ್ರಿಕೆ

>> ಉದಯಕಾಲ ದಿನಪತ್ರಿಕೆ

>> ಪ್ರಜಾಪ್ರಗತಿ

>> ಜನಮಿತ್ರ

>> ಕರಾವಳಿ ಅಲೆ ದಿನಪತ್ರಿಕೆ

>> ಕರಾವಳಿ ಮುಂಜಾವು ದಿನಪತ್ರಿಕೆ

>> ಜಯಕಿರಣ ದಿನಪತ್ರಿಕೆ

>> ಸುದ್ದಿಮೂಲ ದಿನಪತ್ರಿಕೆ

>> ಜನತಾ ವಾಣಿ ದಿನಪತ್ರಿಕೆ

>> ಮೈಸೂರು ಮಿತ್ರ ದಿನಪತ್ರಿಕೆ

>> ಈಶಾನ್ಯ ಟೈಮ್ಸ್ ದಿನಪತ್ರಿಕೆ

>> ಸಂಜೆ ವಾಣಿ

>> ಈ ಸಂಜೆ

>> ಸುಧಾ ಪತ್ರಿಕೆ

>> ಮಯೂರ ಪತ್ರಿಕೆ

>> ಕರ್ಮವೀರ ವಾರಪತ್ರಿಕೆ

>> ವಿಕ್ರಮ ಪತ್ರಿಕೆ

>> ಓ ಮನಸೇ

ಸರ್ಕಾರಿ ಕಾರ್ನರ್

ಸರಕಾರಿ ನೌಕರರ ವೃತ್ತಿಯ ಬಗ್ಗೆ ಪ್ರಶ್ನೆಗಳು


ಅ.ನಂಪ್ರಶ್ನೆಯ ವಿಷಯಉತ್ತರ
(01)ಸ್ವಯಂ ನಿವೃತ್ತಿ ಪಡೆದಾಗ, ನಿವೃತ್ತಿ ವೇತನ ಪಡೆಯುವ ಕುರಿತುಇಲ್ಲಿ ಕ್ಲಿಕ್ ಮಾಡಿ
(02)ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ ಕುರಿತು-1ಇಲ್ಲಿ ಕ್ಲಿಕ್ ಮಾಡಿ
(03)ವೃಂದ ಬದಲಾವಣೆ ಕುರಿತುಇಲ್ಲಿ ಕ್ಲಿಕ್ ಮಾಡಿ
(04)ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ ಕುರಿತು-2ಇಲ್ಲಿ ಕ್ಲಿಕ್ ಮಾಡಿ
(05)ನೌಕರಿಯಲ್ಲಿದ್ದು ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವಾಗಇಲ್ಲಿ ಕ್ಲಿಕ್ ಮಾಡಿ
(06)ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ ಕುರಿತು-3ಇಲ್ಲಿ ಕ್ಲಿಕ್ ಮಾಡಿ
(07)ಪಿಂಚಣಿದಾರರಿಗೆ 80 ವರ್ಷವಾದ ನಂತರದ ಪಿಂಚಣಿ ಕುರಿತುಇಲ್ಲಿ ಕ್ಲಿಕ್ ಮಾಡಿ
(08)ವೈದ್ಯಕೀಯ ವೆಚ್ಚ ಮರುಪಾವತಿ ಕುರಿತುಇಲ್ಲಿ ಕ್ಲಿಕ್ ಮಾಡಿ
(09)ಅನುಕಂಪದ ಆಧಾರದ ಮೇಲೆ ನೌಕರಿ- ವಿದ್ಯಾರ್ಹತೆಇಲ್ಲಿ ಕ್ಲಿಕ್ ಮಾಡಿ
(10)ಪಿಂಚಣಿ ಸೌಲಭ್ಯ ಕ್ಕಾಗಿಇಲ್ಲಿ ಕ್ಲಿಕ್ ಮಾಡಿ
(11)ಕಂಪ್ಯೂಟರ್ ಅರ್ಹತಾ ಪರೀಕ್ಷೆ ಗೆ ಹಾಜರಾಗುವ ಕುರಿತುಇಲ್ಲಿ ಕ್ಲಿಕ್ ಮಾಡಿ
(12)ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಅವಶ್ಯಕತೆ ಕುರಿತುಇಲ್ಲಿ ಕ್ಲಿಕ್ ಮಾಡಿ
(13)ನೇಮಕಾತಿ ಆದೇಶ ಪಡೆಯುವ ಕುರಿತುಇಲ್ಲಿ ಕ್ಲಿಕ್ ಮಾಡಿ
(14)ಸ್ವಯಂ ನಿವೃತ್ತಿ ಪಡೆಯುವ ಕುರಿತುಇಲ್ಲಿ ಕ್ಲಿಕ್ ಮಾಡಿ
(15)

(16)

(17)

(18)

(19)

(20)

(21)

(22)

(23)

(24)

(25)

ಮಂಗಳವಾರ, ಆಗಸ್ಟ್ 4, 2020

ವಿದ್ಯಾಗಮ ಯೋಜನೆ

ವಿದ್ಯಾಗಮದ ಮಾಹಿತಿ ಮತ್ತು ನಮೂನೆಗಳು

ವಿದ್ಯಾಗಮ ಪರಿಚಯ

👇👇ಮಾಹಿತಿಗಾಗಿ👇👇




*ವಿದ್ಯಾಗಮ ಕ್ರಿಯಾ ಯೋಜನೆ*
👇👇👇👇👇👇👇👇👇

https://drive.google.com/file/d/1fKBZjVxSEYeXBzGBKGECb8aQtIxRVb9p/view?usp=drivesdk
🤝🤝🤝🤝🤝🤝
ವಿದ್ಯಾಗಮ ಯೋಜನೆಯ ಕಲಿಕಾ-ಕಾರ್ಯಕ್ರಮದ  ಮುಖ್ಯಾಂಶಗಳು💐💐💐💐💐
# ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.
# ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ.
# ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.
# ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು.


1 ) 1ರಿಂದ 5ನೆ ತರಗತಿ
2 ) 6ರಿಂದ 8ನೆ ತರಗತಿ
3 ) 8ರಿಂದ 10 ನೆ ತರಗತಿ ಎಂಬ ಕಾಲ್ಪನಿಕ ಕೊಠಡಿಗಳಾಗಿ
ಮಾಡಿಕೊಂಡು 20 ರಿಂದ 25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು.
# ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಈಗಾಗಲೇ ಇಲಾಖೆ ಒದಗಿಸಿರುವ ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು.
# ಈಗಾಗಲೇ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು.
# ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ.
1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಸಮೇತ phone,tab,computer & etc ಇವರುಗಳ ವಾಟ್ಸಪ್ ಗುಂಪುಗಳನ್ನು ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ 9 ಗಂಟೆಯೊಳಗೆ / ಸಂಜೆ 5 ಗಂಟೆ ನಂತರ webx /zoom/Googlemeet ಬಳಸಿಕೊಂಡು online classes ಮಾಡಬೇಕು.
....
2 ) ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ
ಇಲ್ಲಿ internet ಸಂಪರ್ಕವಿಲ್ಲದ phone ಗಳಿರುತ್ತವೆ.
ಇಂತಹ ಮಕ್ಕಳಿಗೆ SMS/voice messages ನಿಗದಿಪಡಿಸುದ ವೇಳೆಯಲ್ಲಿ ಮಕ್ಕಳಿಗೆ home assignment ಕೊಟ್ಟು feedback ಪಡೆದುಕೊಳ್ಳಬೇಕು.(call ಮಾಡಿಯಾದರು)
....
3 ) ಜೀನಿಯಸ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಆಧರಿತ ಯಾವುದೇ ಸಾಧನಗಳಿರುವುದಿಲ್ಲ.
ಇಂತಹ ಮಕ್ಕಳನ್ನು ಗುಂಪುಗಳನ್ನಾಸಿಕೊಂಡು ಕನಿಷ್ಠ ವಾರಕ್ಕೊಂದು ಭಾರಿಯಾರು ಕಡ್ಡಾಯ ಬೇಟೆಮಾಡಿ ಮಕ್ಕಳಿಗೆ ಮುಂದಿನ ವಾರದಲ್ಲಿ ಮಾಡುವ home assignment ಕೊಟ್ಟು ಮಾರ್ಗದರ್ಶನ ನೀಡಬೇಕು.
# ಮಕ್ಕಳನ್ನು ಬೇಟೆಯಾಗುವಾಗ ಸರ್ಕಾರದ SOP ಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮುಖಗವಸನ್ನು(ಮಾಸ್ಕ)ಧರಿಸಿಕೊಳ್ಳಬೇಕು.
# ಪ್ರತಿ ಮಾರ್ಗದರ್ಶಿ ಶಿಕ್ಷಕರುಗಳಿಗೆ ವಾರಕ್ಕೊಮ್ಮೆ ಮಕ್ಕಳನ್ನು ಬೇಟೆಯಾಗುಂತೆ ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ.
# ಯಾವುದೇ ಕಾರಣಕ್ಕೂ ಶಿಕ್ಷಕರು ಮಗುವನ್ನು /ಮಗು ಶಿಕ್ಷಕರನ್ನು ಏಕಾಂಗಿಯಾಗಿ ಬೇಟೆಯಾಗಬಾರದು.
#ಸಮುದಾಯ/ಹಳೆವಿದ್ಯಾರ್ಥಿಗಳು/ಸ್ವಯಂ ಸೇವಕರು/ SDMC ಪದಾಧಿಕಾರಿಗಳು/ಪಾಲಕರುಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.
# ಶಿಕ್ಷಕರುಗಳು ತಾವು ಕೈಗೊಂಡ ಪಾಠಪ್ರವಚನಗಳ ದಾಖಲೆಗಳನ್ನುಳಿಸಿಕೊಂಡಿರಬೇಕು.
# ಮಕ್ಕಳಿಗೆ ತಾವು ನೀಡಿದ home assignment/project/science models/etc ಗಳನ್ನು ಪರಿಶೀಲಿಸಿ ರೂಪಣಾತ್ಮಕ ಮೌಲ್ಯಮಾಪನಕ್ಕೆ ಅಂಕಗಳನ್ನು ನೀಡಿ ಅದನ್ನು SATS ನಲ್ಲಿ ದಾಖಲಿಸಬೇಕು.




🤝ಮುಖ್ಯಶಿಕ್ಷಕರ ಗಮನಕ್ಕೆ🤝
 ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ intelligent,brilliant& genius ಗುಂಪುಗಳನ್ನು ರಚಿಸಿ ಅವುಗಳ ಪಟ್ಟಿಯನ್ನು ನೀಡಬೇಕು..

*#ವಿದ್ಯಾಗಮ* *ನಿರಂತರ ಕಲಿಕಾ ಕಾರ್ಯಕ್ರಮ* ಬಗೆಗೆ *ತಮ್ಮ ಹಂತದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳುವ ಕುರಿತು*

*೧) ಕಾಲ್ಪನಿಕ ಕಲಿಕಾ ಕೋಣೆ:*
# ಪ್ರತಿ ಶಾಲೆಯ ೨೦-೨೫ ಮಕ್ಕಳಿಗೆ ಒಬ್ಬ *ಮಾರ್ಗದರ್ಶಿ ಶಿಕ್ಷಕರನ್ನು* ನೇಮಿಸುವುದು.
# ಮಕ್ಕಳ ಸ್ಥಳ- *ಭೌಗೋಳಿಕ ಪ್ರದೇಶ ಆಧರಿಸಿ* ಗುಂಪು‌ ಮಾಡಬೇಕು.
# ೧-೫,೬-೮,-೧೦ ತರಗತಿಗೆ ಅನುಗುಣವಾಗಿ *ನೆರೆಹೊರೆ ಗುಂಪು* ಮಾಡಬೇಕು.

# *ಕಲಿಕಾ ಸಾಮಗ್ರಿಗಳ ಸಿದ್ದತೆ & ಪೂರೈಕೆ:*, ಸರ್ಕಾರದ ಪ್ರೋತ್ಸಾಹದಾಯಕ‌ ಯೋಜನೆ ಸಾಮಗ್ರಿ ನೆರೆಹೊರೆ ತಂಡಕ್ಕೆ ನೀಡಬೇಕು.
# ತಂಡದಲ್ಲಿ ಸ್ವಕಲಿಕೆಗೆ ಅವಕಾಶ ಕಲ್ಪಿಸಿ‌, ಮಾರ್ಗದರ್ಶನ‌ ನೀಡಬೇಕು.
#ಶೇ ೨೦-೩೫ ರಷ್ಟು ಪಠ್ಯಕ್ರಮ ಕಡಿತಗೊಳಿಸಲಾಗುವುದು ಅದರಂತೆ ರಾಜ್ಯ ಹಂತದಿಂದಲೇ ಯೊಜನೆಯನ್ನು ಸಿದ್ದಪಡಿಸಿ ಅಂತರ್ಜಾಲದಲ್ಲಿ ಬಿಡಲಾಗುವುದು.
# ನೆರೆಹೊರೆ ತಂಡಕ್ಕೆ ಆಹಾರ ಧಾನ್ಯ ಬಿಡುಗಡೆ ಮಾಡಲಾಗುವುದು‌. ಪಾಲಕರೇ ಆಹಾರ ತಯಾರಿಸಿ ಮಕ್ಕಳಿಗೆ ವಿತರಿಸಬೇಕು.

# *ಮಕ್ಕಳ ಮತ್ತು ಮಾರ್ಗದರ್ಶಿ ಶಿಕ್ಷಕರ ಸಂಪರ್ಕದ ರೀತಿ‌ ಮೂರು ಹಂತ.*
# ನೆರೆಹೊರೆ ತಂಡಗಳಲ್ಲಿ ಲಭ್ಯವಿರುವ ತಂತ್ರಜ್ಞಾನ ಸಾಧನಗಳನ್ನಾಧರಿಸಿ ೩ ತಂಡಗಳಲ್ಲಿ ವಿಂಗಡಣೆ ಮಾಡಬಹುದು.
# *ಇಂಟೆಲೆಜೆಂಟ್ ಕೋಣೆ* (ಇಂಟರ್ನೆಟ್ ಸಹಿತ ಕಂಪ್ಯೂಟರ್,ಟ್ಯಾಬ್ ಸ್ಮಾರ್ಟ ಫೋನ್ ಲಭ್ಯಿರುವ ತಂಡ)
# *ಬ್ರಿಲಿಯೆಂಟ್ ಕೋಣೆ* (ಇಂಟರ್ನೆಟ್ ಇಲ್ಲದ ಮೊಬೈಲ್ ಇರುವ ಕೋಣೆ)
# *ಜೀನಿಯಸ್ ಕೋಣೆ*( ಯಾವುದೇ ತಂತ್ರಜ್ಞಾನ ಸಾಧನವಿಲ್ಲದ ಕೋಣೆ).
# ಈ ನೆರೆಹೊರೆ ತಂಡದ ಕೋಣೆಗಳಿಗೆ ಮಾರ್ಗದರ್ಶಿ ಶಿಕ್ಷಕರು ವಾರಕ್ಕೆ ಒಂದು ಸಲ ಕನಿಷ್ಠ ಭೇಟಿ ನೀಡಲೇಬೇಕು.
#ಈ ನೆರೆಹೊರೆ ತಂಡಗಳಿಗೆ ಸ್ವಯಂ ಸೇವಾ ಗುಂಪು ಸಿದ್ದಪಡಿಸಬೇಕು. (ಇವರು ಇದೇ ನೆರೆಹೊರೆ ಪ್ರದೇಶದ ಸ್ಥಳೀಯ ತರುಣ ವಿದ್ಯಾವಂತರು ಆಗಿರಬೇಕು).
#ತಂಡದ ಮಾರ್ಗದರ್ಶಿ ಶಿಕ್ಷಕರ ಮತ್ತು ಸ್ವಯಂ ಸೇವಾ ತಂಡದವರ ಲ್ಯಾಪ್ಟಾಪ್,ಸ್ಮಾರ್ಟ ಫೋನ್ ಬಳಸಿ ಕಲಿಕೆಯನ್ನುಂಟು ಮಾಡಬಹುದು.

# *ಮೂರು ರೀತಿಯ ಕೊಠಡಿ ಹೊರತು ಪಡಿಸಿ ಇದ್ದಲ್ಲಿ ಮಾರ್ಗದರ್ಶಿ ಶಿಕ್ಷಕರು ಮಾಡಬೇಕಾದ ಕಾರ್ಯಗಳು*
# ಕಲಿಕಾ ಅಭ್ಯಾಸದ ಹಾಳೆ ಬಳಸುವುದು.
# ಸ್ಥಳೀಯ ಕಲಿಕಾ ಸಾಮಗ್ರಿಗಳ ಮರುಬಳಕೆ ಮಾಡುವುದು‌.
# ಮಕ್ಕಳ ಮನೆಯ ಆಟಗಳ ಮೂಲಕ ಕಲಿಕೆ ಮಾಡಿಸುವುದು.
# ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಉತ್ತಮ ಹವ್ವಾಸ ಬೆಳೆಸುವುದು.
# ಓದು,ಬರಹ,ಹಾಡು,ಚಿತ್ರಕಲೆ ಗಳನ್ನು ಮಾಡಿಸಿ ಮಕ್ಕಳಲ್ಲಿ ವಿಶಿಷ್ಠ ಕೌಶಲ್ಯ ವೃದ್ದಿಸುವುದು.
# ಮನೆಯಲ್ಲಿಯ ವಸ್ತುಗಳನ್ನು ಬಳಸಿ ಸುರಕ್ಷಿತವಾದ ವಿಜ್ಞಾನ ಪ್ರಯೋಗ ಮಾಡಿಸುವುದು.
# ಪಠ್ಯಕ್ಕೆ ಪೂರಕವಾದ ಪ್ರೋಜೆಕ್ಟ ವಿದ್ಯಾರ್ಥಿಗಳಿಂದ ಮಾಡಿಸುವುದು.

# *ಭೋದನಾ ಪ್ರಕ್ರಿಯೆಯ ಸ್ವರೂಪ:*
#೧-೫ ತರಗತಿ ತಂಡಗಳಿಗೆ ಮಾರ್ಗದರ್ಶಿ ಶಿಕ್ಷಕರೇ ಎಲ್ಲ ವಿಷಯಗಳನ್ನು ಬೋಧಿಸಬೇಕು.
#೬-೧೦ತರಗತಿ ತಂಡಗಳಿಗೆ ಮಾರ್ಗದರ್ಶಿ ಶಿಕ್ಷಕರು ತಮ್ಮ ವಿಷಯ ಬೋಧಿಸಬೇಕು. ಇತರ ವಿಷಯಗಳಿಗೆ ಇತರ ವಿಷಯ ಶಿಕ್ಷಕರ ಸಮನ್ವಯ ಮಾಡಬೇಕು.
#೬-೧೦ ತರಗತಿ ತಂಡಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಯೋಜನೆ, ಮೌಲ್ಯಮಾಪನ ಸಂಬಂಧಿಸಿದ ಶಿಕ್ಷಕರೇ ಮಾಡಬೇಕು.
# ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಗಲೇಬೇಕು.
# ವಲಸೆ ಮಕ್ಕಳ ಬಗ್ಗೆಯೂ ಮಾರ್ಗದರ್ಶಿ ಶಿಕ್ಷಕರು ಕಾಳಜಿ‌ಮಾಡಬೇಕು.
# *ಮಾರ್ಗದರ್ಶಿ ಶಿಕ್ಷಕರ ಜವಾಬ್ದಾರಿಗಳು ಅತ್ಯಂತ ಅಮೂಲ್ಯವಾಗಿವೆ.*
 # ಅವೆಲ್ಲವುಗಳನ್ನು ಅತ್ಯಂತ ಉತ್ತಮ ಅನುಷ್ಠಾನ‌ ಮಾಡುವುದರ ಮೂಲಕ ಕಾಲ್ಪನಿಕ ಕಲಿಕಾ ಕೋಣೆಯ ಯಶಸ್ಸು ಅಡಗಿದೆ.
# ಭೌಗೋಳಿಕ ಪ್ರದೇಶ,ತರಗತಿ ಆಧರಿಸಿ ತಂಡಗಳನ್ನು ರಚಿಸಬೇಕ.
# ತಂಡದಲ್ಲಿ ಮೂರು ವಿದದ ವಿಭಿನ್ನ ತಂಡಗಳ ರಚನೆ ಮಾಡಬೇಕು.
#  ತಮ್ಮ‌ನೆರೆಹೊರೆ ತಂಡ ಪ್ರದೇಶದಲ್ಲಿರುವ ೬-೧೪ ವಯಸ್ಸಿನ ಮಕ್ಕಳ ದಾಖಲಾತಿ‌ ಮಾಡಬೇಕು.
# ಮಕ್ಕಳ ಕಲಿಕೆ ಬಗ್ಗೆ, ಮಕ್ಕಳ ಕೃತಿ ಸಂಪುಟ ರಚಿಸಿದ ಬಗ್ಗೆ ತಮ್ಮ ವ್ಯಾಪ್ತಿಯ ಸಿ.ಆರ್.ಪಿ.ಗೆ ಮಾಹಿತಿ ಆಗಾಗ್ಗೆ ನೀಡಬೇಕು.

# *ಸಿಆರ್.ಪಿ. ಬಿಐ ಆರ್ ಟಿ ಗಳ ಜವಾಬ್ದಾರಿಗಳೂ ಇವೆ*: ಇವರು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ನೆರೆಹೊರೆ ತಂಡಗಳ ಸ್ಥಾಪನೆಗೆ ಸಹಕರಿಸಬೇಕು.
# ಮಾರ್ಗದರ್ಶಿ ಶಿಕ್ಷಕರ ನೇಮಕ ಶಾಲೆಯ  ಮು.ಗು ಅವರಿಂದ ಮಾಡಿಸಬೇಕು.
# ಪಠ್ಯುಸ್ತಕ, ಮಧ್ಯಾಹ್ನ ಉಪಹಾರ ಯೋಜನೆ ಸಾಮಗ್ರಿಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವುದು.
# ಮಾರ್ಗದರ್ಶಿ ಶಿಕ್ಷಕರಿಗೆ ಮತ್ತು ವಿಷಯ ಶಿಕ್ಷಕರಿಗೆ ಶೈಕ್ಷಣಿಕ ಬೆಂಬಲ ನೀಡುವುದು.
# ಪ್ರತಿ ತಂಡದ ಮಕ್ಕಳ‌ ಕೃತಿ ಸಂಪುಟಗಳನ್ನು ಪರಿಶೀಲಿಸಿ ಮಾರ್ಗರ್ಶನ‌ ನೀಡುವುದು.
# ಕಾಲ್ಪನಿಕ ಕಲಿಕ ತಂಡಗಳು ಸರಿಯಾಗಿ ನಡೆಯುತ್ತಿರುವ ಬಗೆಗೆ ಆಗಾಗ್ಗೆ ಭೇಟಿ ನೀಡಿ ತಾಲೂಕು ಹಂತಕ್ಕೆ ವರದಿ‌ ಮಾಡಬೇಕು.

# *ಬಿಇಓರವರ ಜವಾಬ್ದಾರಿಗಳು:*
# ವಿದ್ಯಾಗಮ ಕಾರ್ಯಕ್ರಮ ಕುರಿತು ಮಾಹಿತಿ ಹಂಚಿಕೆಗೆ ಎಲ್ಲಾ ಮು.ಗು.ಗಳಿಗೆ ತರಬೇತಿ ಆಯೋಜಿಸುವುದು.
# ಶಾಲಾವಾರು *ನೆರೆಹೊರೆ* ತಂಡ ರಚನೆ‌ ಮಾಡಿಸುವುದು.
# ಮೇಲ್ವಿಚಾರಣೆಗೆ ಸಿ ಆರ್ ಪಿ‌, ಬಿ ಆರ್ ಪಿ, ಬಿಐಆರ್ ಟಿ, ಇಸಿಓ ಗಳನ್ನು‌ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
# ಪ್ರತಿ ೧೫ ದಿನಗಳಿಗೆ ಒಂದು ತಾಲೂಕು ಹಂತದಲ್ಲಿ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಿ ಜಿಲ್ಲಾ ಹಂತಕ್ಕೆ ವರದಿ‌ ಮಾಡುವುದು.
# ಪ್ರತಿ ನೆರೆಹೊರೆ ತಂಡದ ಮಕ್ಕಳ ಕೃತಿ ಸಂಪುಟ ಸಿದ್ದಪಡಿಸಲು ಪ್ರೇರಣೆ ನೀಡುವುದು.
# ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿದ್ಯಾಗಮ ಕಾರ್ಯಕ್ರಮ ಉತ್ತಮ ಅನುಷ್ಠಾನ ಆಗಲು ಶ್ರಮಿಸಬೇಕು.
# ನಿಗಧಿ ಆಗಿರುವಂತೆ ಅಭ್ಯಾಸ ಚಟುವಟಿಕೆಗಳು ಎಲ್ಲ ಶಿಕ್ಷಕರು ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

# *ಡಯಟ್ ಪ್ರಾಂಶುಪಾಲರು ಮತ್ತು ಹಿರಿಯ,ಕಿರಿಯ ಉಪನ್ಯಾಸಕರುಗಳ ಜವಾಬ್ದಾರಿಗಳು*
# ೩ ತಂಡಗಳಿಗೆ ಮಾರ್ಗಸೂಚಿಯಂತೆ ಸಾಹಿತ್ಯ ಅಭಿವೃದ್ದಿಪಡಿಸಿ ಪ್ರತ್ಯೇಕವಾದ ತರಬೇತಿಯನ್ನು ಆರ್ ಪಿ ಗಳಿಗೆ ಮತ್ತು ಶಿಕ್ಷಕರಿಗೆ ನೀಡಬೇಕು.
#  ಹಿರಿಯ,ಕಿರಿಯ ಉಪನ್ಯಾಸಕರನ್ನು ತಾಲೂಕುಗಳಿಗೆ ನೋಡಲ್ ಅಧಿಕಾರಿಗಳೆಂದು ನೇಮಿಸಬೇಕು.
#ವಿದ್ಯಾರ್ಥಿಗಳು ಪೂರ್ಣಗೊಳಿಸಿದ ಅಭ್ಯಾಸ ಚಟುವಟಿಕೆಗಳ ಅನುಪಾಲನೆಯನ್ನು ಮುಗು,ಶಿಕ್ಷಕರ, ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.
# ನೆರೆಹೊರೆ ತಂಡದ ಮಕ್ಕಳಿಗೆ ನೀಡಿದ ಗೃಹ ಪಾಠಗಳನ್ನು ಮಾರ್ಗದರ್ಶಿ ಶಿಕ್ಷಕರು  ತಿದ್ದುತ್ತಿರುವರೇ ಎಂಬುದನ್ನು ಅವಲೋಕಿಸಬೇಕು‌.
# ಪ್ರತಿ ೧೫ ದಿನಗಳಿಗೆ ಒಂದು ಸಲ ಜಿಲ್ಲೆಯ ಸಮಗ್ರ ಪ್ರಗತಿ ವರದಿಯನ್ನು ನಿರ್ದೇಶಕರು, ಡಿ ಎಸ್ ಇ ಆರ್ ಟಿ ಬೆಂಗಳೂರ ಇವರಿಗೆ ಕಳಿಸಬೇಕು.

# *ಜಿಲ್ಲಾ ಉಪನಿರ್ದೇಶಕರ(ಆಡಳಿತ) ಜವಾಬ್ದಾರಿಗಳು:*
#  ಜಿಲ್ಲೆಯ ಪ್ರತಿಯೊಂದು ಮಗುವಿನ ಕೃತಿ ಸಂಪುಟ ಸಿದ್ದಪಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
# ಜಿಲ್ಲೆಯ ಎಲ್ಲ ಶಾಲೆಗಳಿಗೆ ನಿಗಧಿತ ಅನುದಾನ ತಲುಉವಂತೆ ನೋಡಿಕೊಳ್ಳಬೇಕು.
# ಜಿಲ್ಲೆಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ದಾನಿಗಳು, ಶಿಕ್ಷಣಾಸಕ್ತರು ಗಳನ್ನು ಗುರುತಿಸಿ  ಶಾಲೆಗಳಿಗೆ, ಮಾರ್ಗದರ್ಶಕ ಶಿಕ್ಷರಿಗೆ, ಅಗತ್ಯ ಸೇವೆ ಸೌಲಭ್ಯ ಒದಗಿಸಲು ಸಹಕಾರ ನೀಡಬೇಕು.
# ಡಿಡಿಪಿಐ ರವರು  ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಇವರನ್ನು ಸಂಪರ್ಕಿಸಿ ನಗರಾಭಿವೃದ್ದಿ ಇಲಾಖೆ, ಪಂಚಾಯತ ರಾಜ್ ಇಲಾಖೆ,‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ  ಸಹಯೋಗದೊಂದಿಗೆ ಗ್ರಾಮ,ವಾರ್ಡ ಮಟ್ಟದಲ್ಲಿ *ವಿದ್ಯಾಗಮ* ಕಾರ್ಯಕ್ರಮಕ್ಕೆ ಅವಶ್ಯ ಸುರಕ್ಷತೆಯನ್ನು ವ್ಯವಸ್ಥೆ ಮಾಡಬೇಕು.
# ಜಿಲ್ಲಾ ಮಟ್ಟದಲ್ಲಿ ಈ *ವಿದ್ಯಾಗಮ* ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಸಮುದಾಯ ಸಂಘಗಳ ಸಹಕಾರ ಪಡೆಯುವುದು.
# ಡಿಡಿಪಿಐ ಕಚೇರಿಯ ಹಂತದಲ್ಲಿ ಶಿಕ್ಷಣಾಧಿಕಾರಿಗಳು , ಡಿವೈಪಿಸಿ, , ಇಓ ಮ ಉ ಯೋ ಎಸ್ ಐ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
# ಪ್ರತಿ ೧೫ ದಿನಗಳಿಗೆ ಒಂದು ಸಲ ಜಿಲ್ಲೆಯ ಸಮಗ್ರ ಕಲಿಕಾ ಪ್ರಗತಿಯನ್ನು ನಿರ್ದೇಶಕರು,ಡಿ.ಎಸ್.ಇ.ಆರ್.ಟಿ, ನಿರ್ದೇಶಕರು ಪ್ರಾಥಮಿಕ ಶಿಕ್ಷಣ, ಪ್ರೌಢ,ಶಿಕ್ಷಣ ಬೆಂಗಳೂರು ಇವರಿಗೆ ಸಲ್ಲಿಸುವುದು.

# *ಜಿಲ್ಲಾಧಿಕಾರಿಗಳ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಜವಾಬ್ದಾರಿಗಳು*
# ಈ ಮಹತ್ವಪೂರ್ಣ *ವಿದ್ಯಾಗಮ* ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವುಧ ಇಲಾಖೆಗಳ ಸಹಕಾರ ಮತ್ತು ಸಹಯೋಗ ನೀಡುವ ಮೂಲಕ ಕಾರ್ಯಕ್ರಮದ ಫಲವು ಪ್ರತಿ‌ಮಗುವಿಗೆ ತಲುಪುವಂತೆ ಕ್ರಮ ವಹಿಸುವುದು‌
# ಈ ವಿದ್ಯಾಗಮ‌ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಜನಪ್ರತಿನಿಧಿಗಳಿಗೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಗಮನಕ್ಕೆ ತಂದು, ಎಲ್ಲರ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸುವುದು.

ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ ವಿಡೀಯೋಗಳು

        ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ            YOU TUBE VIDEOS LINKS ಭಾಗ ೧ ವಿಡಿಯೊ ಭಾಗ ೨ ವಿಡಿಯೊ ಭಾಗ 3 ವಿಡಿಯೊ ಭಾಗ 4 ವಿಡಿಯೊ