NPS ತೊಲಗಲಿ, OPS ಬೆಳಗಲಿ. ಡಿಸೆಂಬರ್ 19 ಕ್ಕೆ ನಮ್ಮೆಲ್ಲರ ನಡೆ ಬೆಂಗಳೂರು ಕಡೆ. ಬೇಕೇ ಬೇಕು ಪಿಂಚಣಿ ಬೇಕು. ಸಾಕು ಸಾಕು NPS ಸಾಕು. ನಮ್ಮ ಹಾಗೂ ನಮ್ಮವರ ಭವಿಷ್ಯದ ಭದ್ರತೆಗಾಗಿ OPS ಬೇಕೇ ಬೇಕು

ಭಾನುವಾರ, ಸೆಪ್ಟೆಂಬರ್ 26, 2021

6th ವಿಜ್ಞಾನ, 7 ಸಸ್ಯಗಳನ್ನು ತಿಳಿಯುವುದು.

 7. ಸಸ್ಯಗಳನ್ನು ತಿಳಿಯುವುದು

ಅಭ್ಯಾಸಗಳು


1. ಈ ಕೆಳಗಿನ ಹೇಳಿಕೆಗಳನ್ನು ಸರಿಪಡಿಸಿ ಬರೆಯಿರಿ.

ಎ) ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಕಾಂಡ ಇರುತ್ತದೆ.

ಉ. ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಬೇರು ಹೀರುತ್ತದೆ.


ಬಿ. ಎಲೆಗಳು ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.

. ಬೇರುಗಳು ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.


ಸಿ. ಬೇರುಗಳು ಎಲೆಗಳಿಗೆ ನೀರನ್ನು ಸಾಗಿಸುತ್ತವೆ.

ಉ. ಕಾಂಡವು ಎಲೆಗಳಿಗೆ ನೀರನ್ನು ಸಾಗಿಸುತ್ತದೆ.


ಡಿ. ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಯಾವಾಗಲೂ ಸಮ.

ಉ. ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ.


ಇ. ಒಂದು ಹೂವಿನಲ್ಲಿ ಪುಷ್ಪ ಪತ್ರಗಳು ಒಟ್ಟಿಗೆ ಸೇರಿದ್ದರೆ, ಅದರ ಪುಷ್ಪದಳಗಳು ಸಹ ಒಟ್ಟಿಗೆ ಸೇರಿರುತ್ತವೆ.

ಉ. ಒಂದು ಹೂವಿನಲ್ಲಿ ಪುಷ್ಪ ಪತ್ರಗಳು ಒಟ್ಟಿಗೆ ಸೇರಿದ್ದರೆ, ಅದರ ಪುಷ್ಪದಳಗಳು ಒಟ್ಟಿಗೆ ಸೇರಿರುವುದಿಲ್ಲ.


ಎಫ್. ಒಂದು ಹೂವಿನಲ್ಲಿ ಪುಷ್ಪದಳಗಳು ಒಟ್ಟಿಗೆ ಸೇರಿದ್ದರೆ, ಆಗ  ಶಲಾಕೆಯು ಪುಷ್ಪದಳಕ್ಕೆ ಸೇರಿಕೊಂಡಿರುತ್ತದೆ.

ಉ. ಒಂದು ಹೂವಿನಲ್ಲಿ ಪುಷ್ಪದಳಗಳು ಒಟ್ಟಿಗೆ ಸೇರಿದ್ದರೆ, ಆಗ ಅಂಡಾಶಯಕ್ಕೆ ಸೇರಿಕೊಂಡಿರುತ್ತದೆ.


2. ಕೋಷ್ಟಕ 7.3 ರಲ್ಲಿ ನೀವು ಅಧ್ಯಯನ ಮಾಡಿದಂತೆ ಎ.)ಒಂದು ಎಲೆ ಬಿ.) ತಾಯಿಬೇರು ಮತ್ತು ಸಿ) ಒಂದು ಹೂವಿನ ಚಿತ್ರವನ್ನು ರಚಿಸಿ





3. ನಿಮ್ಮ ಮನೆ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಎತ್ತರವಾಗಿರುವ ಆದರೆ ದುರ್ಬಲ ಕಾಂಡವಿರುವ ಒಂದು ಸಸ್ಯವನ್ನು ಕಾಣಬಲ್ಲಿರಾ ? ಅದರ ಹೆಸರು ಬರೆಯಿರಿ. ಇದನ್ನು ಯಾವ ಗುಂಪಿಗೆ ವರ್ಗೀಕರಿಸುವಿರಿ.

ಉ. ತುಳಸಿ. ---  ಗಿಡಮೂಲಿಕೆ.


4. ಕಾಂಡದ ಕಾರ್ಯವೇನು?

ಉ. *ಕಾಂಡವು ನೀರು ಮತ್ತು ಖನಿಜಾಂಶಗಳನ್ನು ಮೇಲೆರುವುದಕ್ಕೆ ಸಹಾಯ ಮಾಡುತ್ತದೆ.

* ಕಾಂಡವು ಸಸ್ಯಕ್ಕೆ ಆಧಾರವನ್ನು ಒದಗಿಸುತ್ತದೆ.


5. ಈ ಕೆಳಗಿನ ಯಾವ ಎಲೆಗಳಲ್ಲಿ ಜಾಲಿಕಾರೂಪ ಸಿರ ವಿನ್ಯಾಸವಿದೆ.

ಗೋದಿ,ತುಳಸಿ, ಮೆಕ್ಕೆಜೋಳ, ಕೋತಂಬರಿ,ಚೀನಾ ಗುಲಾಬಿ.

ಉ. ಕೋತಂಬರಿ, ಗುಲಾಬಿ, ತುಳಸಿ.


6. ಒಂದು ಸಸ್ಯಕ್ಕೆ ತಂತು ಬೇರಿದ್ದರೆ, ಅದರ ಎಲೆಗಳಲ್ಲಿ ಯಾವ ಬಗೆಯ ಸಿರಾ ವಿನ್ಯಾಸವಿರುತ್ತದೆ ?

ಉ. ಸಮಾನಾಂತರ ಸಿರ ವಿನ್ಯಾಸ


7. ಒಂದು ಸಸ್ಯದ ಎಲೆಗಳಲ್ಲಿ ಜಾಲಿಕಾರೂಪ ಸಿರ ವಿನ್ಯಾಸವಿದ್ದರೆ ಅದರಲ್ಲಿ ಯಾವ ಬಗೆಯ ಬೇರು ಇರುತ್ತದೆ?

ಉ. ತಾಯಿಬೇರು


8. ಕಾಗದದ ಹಾಳೆಯ ಮೇಲಿರುವ ಎಲೆಯ ಅಚ್ಚನ್ನು ನೋಡಿ ಅದರ ಸಸ್ಯದಲ್ಲಿ ತಾಯಿಬೇರು ಇದೆಯೇ ಅಥವಾ ತಂತು ಬೇರು ಇದೆಯೇ ಎಂದು ಕಂಡುಹಿಡಿಯಲು ನಿಮಗೆ ಸಾಧ್ಯವೇ?

ಉ. ಸಾಧ್ಯವಿದೆ. 

ಎಲೆಯಲ್ಲಿ ಜಾಲಿಕಾ ರೂಪ ಸಿರ ವಿನ್ಯಾಸವಿದ್ದರೆ ಸಸ್ಯ ತಾಯಿಬೇರು ಹೊಂದಿದೆ.

ಎದೆಯಲ್ಲಿ ಸಮಾನಾಂತರ ಸಿರಾ ವಿನ್ಯಾಸವಿದ್ದರೆ ಸಸ್ಯ ತಂತು ಬೇರು ಹೊಂದಿದೆ.


9. ಹೂವಿನ ಭಾಗಗಳು ಯಾವುವು?

ಉ. ತೊಟ್ಟು ,  ಪುಷ್ಪ ಪತ್ರ , ಪುಷ್ಪದಳ , ಕೇಸರ ದಂಡ, ಕೇಸರಗಳು, ಶಲಾಕಾಗ್ರ, ಅಂಡಾಶಯ.


11. ಆಹಾರವನ್ನು ತಯಾರಿಸುವ ಸಸ್ಯದ ಭಾಗ ಮತ್ತು ಪ್ರಕ್ರಿಯೆಯನ್ನು ಹೆಸರಿಸಿ.

ಉ. ಆಹಾರವನ್ನು ತಯಾರಿಸುವ ಸಸ್ಯದ ಭಾಗ ಎಲೆ.

ಆಹಾರ ತಯಾರಿಸುವ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ ಕ್ರಿಯೆ ಎನ್ನುವರು.


12. ಹೂವಿನ ಯಾವ ಭಾಗದಲ್ಲಿ ನೀವು ಅಂಡಾಶಯವನ್ನು ಕಾಣುತ್ತೀರಿ

ಉ.ಶಲಾಕಾಗ್ರದ ಅತ್ಯಂತ ಕೆಳಭಾಗ ಮತ್ತು ಉಬ್ಬಿದ ಭಾಗವೇ ಅಂಡಾಶಯ.


13. ಪುಷ್ಪ ಪತ್ರಗಳು ಪ್ರತ್ಯೇಕ ವಿರುವ ಮತ್ತು ಪುಷ್ಪಪತ್ರ ಸೇರಿರುವ ಎರಡು ಸಸ್ಯಗಳನ್ನು ಹೆಸರಿಸಿ.

ಉ. ಪುಷ್ಪಪತ್ರ ಪ್ರತ್ಯೇಕ ವಿರುವ ಸಸ್ಯಗಳು- ಮಲ್ಲಿಗೆ, ಕನಕಾಂಬರ, 

ಪಾಪ ಸೇರಿರುವ ಸಸ್ಯಗಳು- ದಾಸವಾಳ, ಗುಲಾಬಿ, ಸೇವಂತಿಗೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ ವಿಡೀಯೋಗಳು

        ವೃತ್ತದ ಸುತ್ತಳತೆ ಮತ್ತು ವಿಸ್ತೀರ್ಣ            YOU TUBE VIDEOS LINKS ಭಾಗ ೧ ವಿಡಿಯೊ ಭಾಗ ೨ ವಿಡಿಯೊ ಭಾಗ 3 ವಿಡಿಯೊ ಭಾಗ 4 ವಿಡಿಯೊ