5. ಪದಾರ್ಥಗಳನ್ನು ಬೇರ್ಪಡಿಸುವಿಕೆ
************** ಅಭ್ಯಾಸಗಳು **************
1. ಒಂದು ಮಿಶ್ರಣದ ವಿವಿಧ ಘಟಕಗಳನ್ನು ನಾವು ಏಕೆ ಬೇರ್ಪಡಿಸಬೇಕು? ಉದಾಹರಣೆಗಳನ್ನು ಕೊಡಿ.
ಉ. *ಎರಡು ಪ್ರತ್ಯೇಕ, ಆದರೆ ಉಪಯುಕ್ತವಾದ ಘಟಕಗಳನ್ನು ಬೇರ್ಪಡಿಸಲು.
* ಉಪಯುಕ್ತವಲ್ಲದ ಘಟಕಗಳನ್ನು ತೆಗೆಯಲು
* ಅಶುದ್ಧ ಕಾರಕ ಅಥವಾ ಹಾನಿಕಾರಕ ಘಟಕಗಳನ್ನು ಬೇರ್ಪಡಿಸುವುದು
ಉದಾ. ೧. ಬೆಣ್ಣೆಯನ್ನು ತಡೆಯಲು ಮೊಸರನ್ನು ಕಡೆಯುವುದು.
೨. ಜೋಳದಲ್ಲಿ ನ ಕಸವನ್ನು ಬೇರ್ಪಡಿಸುವುದು.
2. ತೋರುವಿಕೆ ಎಂದರೇನು? ಇದನ್ನು ಎಲ್ಲಿ ಬಳಸುವರು?
ಉ. ಬೀಸುವ ಗಾಳಿಯ ಸಹಾಯದಿಂದ ಒಂದು ಮಿಶ್ರಣ ದಲ್ಲಿರುವ ಭಾರವಾದ ಮತ್ತು ಹಗುರವಾದ ಘಟಕಗಳನ್ನು ಬೇರ್ಪಡಿಸುವ ವಿಧಾನವೇ ತೋರುವಿಕೆ.
ಈ ವಿಧಾನವನ್ನು ಧಾನ್ಯದ ಕಾಳಿನಿಂದ ಹಗುರವಾದ ಹೊಟ್ಟಿನ ಕಣಗಳನ್ನು ಬೇರ್ಪಡಿಸಲು ರೈತರು ಅನುಸರಿಸುತ್ತಾರೆ.
3. ಬೇಯಿಸುವ ಮುನ್ನ ಬೇಳೆಯಲ್ಲಿರುವ ಹೊಟ್ಟು ಅಥವಾ ಧೂಳಿನ ಕಣಗಳನ್ನು ಬೇರ್ಪಡಿಸುವ.
ಉ. ತೂರುವಿಕೆಯ ವಿಧಾನದ ಮೂಲಕ
4. ಜರಡಿ ಹಿಡಿಯುವಿಕೆ ಎಂದರೇನು? ಇದನ್ನು ಎಲ್ಲಿ ಬಳಸುವರು.
ಉ. ಮಿಶ್ರಣದಲ್ಲಿರುವ ವಿವಿಧ ಗಾತ್ರದ ಕಣಗಳನ್ನು ಬೇರ್ಪಡಿಸುವ ವಿಧಾನವೇ ಜರಡಿ ಹಿಡಿಯುವಿಕೆ.
*ಜೋಳ ಗೋಧಿಯಲ್ಲಿರುವ ಹೊಟ್ಟು ಮತ್ತು ಕಲ್ಲುಗಳನ್ನು ಬೇರ್ಪಡಿಸಲು
* ಮರಳಿ ನಲ್ಲಿರುವ ವಿವಿಧ ಗಾತ್ರಗಳನ್ನು ಕಲ್ಲುಗಳನ್ನು ಬೇರ್ಪಡಿಸಲು
* ಹಿಟ್ಟಿನಲ್ಲಿರುವ ಹೊಟ್ಟನ್ನು ಬೇರ್ಪಡಿಸಲು.
5. ಮರಳು ಮತ್ತು ನೀರನ್ನು ಅವುಗಳ ಮಿಶ್ರಣದಿಂದ ಹೇಗೆ ಬೇರ್ಪಡಿಸುವುದು?
ಉ. ಗುರುತ್ವ ಬಲ, ಬಸಿಯುವಿಕೆ ಮತ್ತು ಸೋಸುವಿಕೆ
6. ಗೋಧಿ ಹಿಟ್ಟಿನಲ್ಲಿ ಮಿಶ್ರಣ ಗೊಂಡಿರುವ ಸಕ್ಕರೆಯನ್ನು ಬೇರೆ ಮಾಡಲು ಸಾಧ್ಯವೇ? ಹೌದು ಎಂದಾದರೆ, ಹೇಗೆ ಮಾಡುವಿರಿ?
ಉ. ಹೌದು
ಜರಡಿ ಹಿಡಿಯುವುದರ ಮೂಲಕ ಗೋಧಿ ಹಿಟ್ಟು ಹಾಗೂ ಸಕ್ಕರೆಯ ಮಿಶ್ರಣವನ್ನು ಬೇರ್ಪಡಿಸಲು ಸಾಧ್ಯ.
7. ಮಣ್ಣು ಮಿಶ್ರಿತ ನೀರಿನ ಮಾದರಿಯಿಂದ ಸ್ವಚ್ಛ ನೀರನ್ನು ಹೇಗೆ ಪಡೆಯುವಿರಿ.
ಉ. ಸೋಸುವಿಕೆ ಯ ವಿಧಾನದ ಮೂಲಕ.
8. ಬಿಟ್ಟ ಸ್ಥಳ ತುಂಬಿರಿ
ಎ. ಪೈರಿನಿಂದ ಭತ್ತದ ಕಾಳುಗಳನ್ನು ಬೇರ್ಪಡಿಸುವ ವಿಧಾನವನ್ನು................ ಎನ್ನುವರು.
ಉ. ಬಡಿಯುವಿಕೆ
ಬಿ. ಕುದಿಸಿ ಆರಿಸಿದ ಹಾಲನ್ನು ಬಟ್ಟೆಯ ತುಂಡಿಗೆ ಸುರಿದು ಅದರ ಮೇಲೆ ಉಳಿದುಕೊಳ್ಳುತ್ತದೆ. ಹಾಲಿನಿಂದ ಕೆನೆಯನ್ನು ಪ್ರತ್ಯೇಕಿಸುವ ಈ ಕ್ರಿಯೆ..........ಗೆ ಉದಾಹರಣೆಯಾಗಿದೆ.
ಉ. ಸೋಸುವಿಕೆ
ಸಿ. ಸಮುದ್ರದ ನೀರಿನಿಂದ ಉಪ್ಪನ್ನು.......... ಕ್ರಿಯೆಯಿಂದ ಪಡೆಯುವರು
ಉ. ಆವಿಕರಣ
ಡಿ. ಒಂದು ಬಕೆಟ್ ನಲ್ಲಿ ಮಣ್ಣು ಮಿಶ್ರಿತ ನೀರನ್ನು ಇಡೀ ರಾತ್ರಿ ಇಟ್ಟಾಗ ಅಶುದ್ಧ ಕಾರಕಗಳು ತಳದಲ್ಲಿ ಕೆಳಗಡೆ ಸಂಗ್ರಹಗೊಂಡವು. ಆ ನಂತರ ಸ್ವಚ್ಛ ನೀರನ್ನು ಮೇಲಿಂದ ಬಸಿಯಲಾಯಿತು ಈ ಉದಾಹರಣೆಯಲ್ಲಿ ಬೇರ್ಪಡಿಸುವ ಕ್ರಿಯೆಯನ್ನು......... ಎನ್ನುವರು.
ಉ. ಗುರುತ್ವ ಬಲದಿಂದ ಬೇರ್ಪಡಿಸುವಿಕೆ ಮತ್ತು ಬಸಿಯುವಿಕೆ
9.ಸರಿ ಅಥವಾ ತಪ್ಪು ಎಂದು ಗುರುತಿಸಿ
ಎ. ಹಾಲು ಮತ್ತು ನೀರಿನ ಮಿಶ್ರಣವನ್ನು ಸೋರಿಕೆಯಿಂದ ಬೇರ್ಪಡಿಸಬಹುದು
----- ತಪ್ಪು
ಬಿ. ಉಪ್ಪು ಮತ್ತು ಸಕ್ಕರೆಯ ಪುಡಿ ಮಾಡಿದ ಮಿಶ್ರಣವನ್ನು ತೋರುವಿಕೆ ಕ್ರಿಯೆಯಿಂದ ಬೇರ್ಪಡಿಸಬಹುದು.
----- ತಪ್ಪು
ಸಿ. ಚಹಾ ಸಕ್ಕರೆಯನ್ನು ಬೇರ್ಪಡಿಸಲು ಸೋರುವಿಕೆಯನ್ನು ಬಳಸಬಹುದು.
---- ತಪ್ಪು
ಡಿ. ಧಾನ್ಯ ಮತ್ತು ಹೊಟ್ಟನ್ನು ಬಸಿಯುವಿಕೆ ಕ್ರಿಯೆಯಿಂದ ಬೇರ್ಪಡಿಸಬಹುದು
---- ತಪ್ಪು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ