✨ ಜ್ಞಾನಕ್ಕಾಗಿ *ಜ್ಞಾನ ಸೌರಭ* ( JNANA SOURABHA ) YOUTUBE CHANNEL SUBSCRIBE ಮಾಡಿಕೊಳ್ಳಿ ✨ SHARE ಮಾಡಿ ✨ .....✨. ಶಿಕ್ಷಣದ ದೀಪ ಬೆಳಗಲಿ, ಜ್ಞಾನದ ಜ್ಯೋತಿ ಪ್ರಕಾಶಿಸಲಿ ✨

ಶನಿವಾರ, ಸೆಪ್ಟೆಂಬರ್ 25, 2021

6th ವಿಜ್ಞಾನ .2. ಆಹಾರದ ಘಟಕಗಳು. ಪ್ರಶ್ನೋತ್ತರ

ಆಹಾರದ ಘಟಕಗಳು

 2 ಆಹಾರದ ಘಟಕಗಳು 

~~~ : ಅಭ್ಯಾಸಗಳು : ~~~~~


೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ 

ಉತ್ತರ :-  ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ಗಳು , ಪ್ರೋಟೀನ್ಗಳು ಇವುಗಳ ಜತೆಗೆ ನೀರು ಮತ್ತು ನಾರು ಪದಾರ್ಥಗಳನ್ನು ಆಹಾರ ಒಳಗೊಂಡಿರುತ್ತದೆ.


೨ .  ಕೆಳಗಿನವುಗಳನ್ನು ಹೆಸರಿಸಿ.

ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು 

  ಉತ್ತರ :- ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬು


ಬಿ ) ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಪೋಷಕಗಳು 

  ಉತ್ತರ :- ಪ್ರೋಟೀನ್ ಗಳು ಮತ್ತು ಖನಿಜಗಳು


ಸಿ ) ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್ 

  ಉತ್ತರ :- ವಿಟಮಿನ್‌ ಎ


ಡಿ ) ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಿರುವ ಖನಿಜ 

ಉತ್ತರ :- ಕ್ಯಾಲ್ಸಿಯಂ


 . ಕೆಳಗಿನ ಆಹಾರ ಗಣಕಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ. 

ಎ ) ಕೊಬ್ಬು 

      ಉತ್ತರ :- ಮಾಂಸ , ಮೊಟ್ಟೆ , ಶೇಂಗಾ , ಗೋಡಂಬಿ

ಬಿ ) ಪಿಸ್ಟ

ಉತ್ತರ :- ಗೋಧಿ , ಜೋಳ , ಮಾವು , ಕಬ್ಬು

ಸಿ ) ಆಹಾರದ ನಾರು ಪದಾರ್ಥ 

ಉತ್ತರ :- ತಾಜಾ ಹಣ್ಣುಗಳು , ತರಕಾರಿಗಳು

ಡಿ ) ಪ್ರೊಟೀನ್ 

        ಉತ್ತರ :- ಕಾಳುಗಳು ( ಹೆಸರು, ತೊಗರಿ, ಕಡ್ಲಿ, ಬಟಾಣೆ, ಸೋಯಾಬೀನ್ಸ್ ) , ಮಾಂಸ , ಮೊಟ್ಟೆ , ಮೀನು


೪ . ಸರಿಯಾದ ಹೇಳಿಕೆಗಳಿಗೆ (√ ) ಸರಿ ಗುರುತು ಮಾಡಿ 

ಎ) ಅನ್ನವನ್ನು ಮಾತ್ರ ಸೇವಿಸುವುದರ ಮೂಲಕ ನಾವು ನಮ್ಮ ದೇಹದ ಪೋಷಕಗಳ ಅಗತ್ಯತೆಯನ್ನು ಪೂರೈಸಬಹುದು ( × )

ಬಿ ) ಸಂತುಲಿತ ಆಹಾರವನ್ನು ಸೇವಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು ( √ )

ಸಿ ) ಸಂತುಲಿತ ಆಹಾರವು ವಿವಿಧ ಆಹಾರ ಪದಾರ್ಥಗಳನ್ನು ಒಳಗೊಂಡಿರಬೇಕು ( √ )

ಡಿ ) ದೇಹಕ್ಕೆ ಎಲ್ಲಾ ಪೋಷಕಗಳನ್ನು ಒದಗಿಸಲು ಮಾಂಸ ಮಾತ್ರ ಸಾಕು ( × )


೫ . ಖಾಲಿ ಜಾಗಗಳನ್ನು ಭರ್ತಿ ಮಾಡಿ 

ಎ ) ವಿಟಮಿನ್-ಡಿ ಕೊರತೆಯಿಂದ __________ ರೋಗ ಉಂಟಾಗುತ್ತದೆ

ಉತ್ತರ :- ರಿಕೆಟ್ಸ್ 

ಬಿ )  ಬೇರಿಬೇರಿ ರೋಗವು ____________ ಕೊರತೆಯಿಂದ ಉಂಟಾಗುತ್ತದೆ

ಉತ್ತರ :- ವಿಟಮಿನ್ ಬಿ1

ಸಿ )  ವಿಟಮಿನ್-ಸಿ ಕೊರತೆಯು____________ ರೋಗವನ್ನು ಉಂಟುಮಾಡುತ್ತದೆ.

ಉತ್ತರ :- ಸ್ಕರ್ವಿ

ಡಿ )  ನಮ್ಮ ಆಹಾರದಲ್ಲಿ_____________ ನ ಕೊರತೆಯಿಂದ ಇರುಳು ಕುರುಡುತನ ಉಂಟಾಗುತ್ತದೆ.

ಉತ್ತರ :- ವಿಟಮಿನ್ ಎ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಚೇತನ 3/12/2025

ಥೀಮ್‌ಗಳು ೧೯೯೮: "ಕಲೆ, ಸಂಸ್ಕೃತಿ ಮತ್ತು ಸ್ವತಂತ್ರ ಬದುಕು" ೧೯೯೯: "ಹೊಸ ಸಹಸ್ರಮಾನಕ್ಕೆ ಎಲ್ಲರಿಗೂ ಲಭ್ಯತೆ" 2000: "ಮಾಹ...