✨ ಜ್ಞಾನಕ್ಕಾಗಿ *ಜ್ಞಾನ ಸೌರಭ* ( JNANA SOURABHA ) YOUTUBE CHANNEL SUBSCRIBE ಮಾಡಿಕೊಳ್ಳಿ ✨ SHARE ಮಾಡಿ ✨ .....✨. ಶಿಕ್ಷಣದ ದೀಪ ಬೆಳಗಲಿ, ಜ್ಞಾನದ ಜ್ಯೋತಿ ಪ್ರಕಾಶಿಸಲಿ ✨

ಶನಿವಾರ, ಸೆಪ್ಟೆಂಬರ್ 25, 2021

6th ವಿಜ್ಞಾನ . 3 ಎಳೆಯಿಂದ ಬಟ್ಟೆ. ಪ್ರಶ್ನೋತ್ತರ

 6th - ವಿಜ್ಞಾನ - ಅಧ್ಯಾಯ ೩ - ಎಳೆಯಿಂದ ಬಟ್ಟೆ - ಪ್ರಶ್ನೋತ್ತರಗಳು


ಅಧ್ಯಾಯ 3 ಎಳೆಯಿಂದ ಬಟ್ಟೆ 

   ~~~ :   ಅಭ್ಯಾಸಗಳು :~~~~~ 

1. ಕೆಳಗಿನ ನಾರುಗಳನ್ನು ನೈಸರ್ಗಿಕ ಅಥವಾ ಸಂಶ್ಲೇಷಿತ ಎಂಬುದಾಗಿ ವರ್ಗೀಕರಿಸಿ .

( ನೈಲಾನ್, ಉಣ್ಣೆ, ಹತ್ತಿ ,ರೇಷ್ಮೆ ಪಾಲಿಯೆಸ್ಟರ್, ಸೆಣಬು )

ಉತ್ತರ :- 

ನೈಸರ್ಗಿಕ ನಾರು - ಉಣ್ಣೆ, ಹತ್ತಿ, ರೇಷ್ಮೆ, ಸೆಣಬು

ಸಂಶ್ಲೇಷಿತ ನಾರು - ನೈಲಾನ್ , ಪಾಲಿಯೆಸ್ಟರ್‌


2 . ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂಬುದನ್ನು ತಿಳಿಸಿ 

ಎ) ನೂಲನ್ನು ನಾರಿನಿಂದ ತಯಾರಿಸಲಾಗುತ್ತದೆ 

=> ಸರಿ

ಬಿ ) ನೂಲುವುದು ನಾರುಗಳನ್ನು ಮಾಡುವ ಕ್ರಿಯೆ 

=> ತಪ್ಪು

ಸಿ ) ಸೆಣಬು ತೆಂಗಿನಕಾಯಿಯ ಹೊರಕವಚ 

=> ತಪ್ಪು

ಡಿ ) ಹತ್ತಿಯಿಂದ ಬೀಜ ಬೇರ್ಪಡಿಸುವ ಕ್ರಿಯೆಯನ್ನು ಹಿಂಜುವುದು ಎನ್ನುವರು 

=> ಸರಿ

ಇ ) ನೂಲನ್ನು ಮೇಯುವುದರಿಂದ ಬಟ್ಟೆ ತಯಾರಾಗುತ್ತದೆ 

=> ಸರಿ

ಎಫ್ ) ಗಿಡದ ಕಾಂಡದಿಂದ ರೇಷ್ಮೆ ನಾರನ್ನು ಪಡೆಯಲಾಗುತ್ತದೆ 

=> ತಪ್ಪು

ಜಿ) ಪಾಲಿಯೆಸ್ಟರ್ ಒಂದು ನೈಸರ್ಗಿಕ ನಾರು 

= ತಪ್ಪು


3 . ಬಿಟ್ಟ ಸ್ಥಳಗಳನ್ನು ತುಂಬಿ 

ಎ) ಸಸ್ಯದ ನಾರುಗಳನ್ನು ____ ಮತ್ತು _______ ಗಳಿಂದ ಪಡೆಯಲಾಗುತ್ತದೆ.

=> ಸೆಣಬು , ಹತ್ತಿ

ಬಿ) ಪ್ರಾಣಿಯ ನಾರುಗಳು_____ ಮತ್ತು _____

=> ರೇಷ್ಮೆ ಮತ್ತು ಉಣ್ಣೆ

4 ) ಸಸ್ಯದ ಯಾವ ಭಾಗಗಳಿಂದ ಹತ್ತಿ ಮತ್ತು ಸೆಣಬು ಗಳನ್ನು ಪಡೆಯಲಾಗುತ್ತದೆ ?

ಉತ್ತರ :- ಸೆಣಬು - ಕಾಂಡ

             ಹತ್ತಿ - ಹಣ್ಣು

5 ) ತೆಂಗಿನ ನಾರಿನಿಂದ ತಯಾರಾಗುವ ಎರಡು ವಸ್ತುಗಳನ್ನು ಹೆಸರಿಸಿ .

ಉತ್ತರ - ಚಾಪೆ  , ಗೊಂಬೆ

ನಾರಿನಿಂದ ನೂಲನ್ನು ತಯಾರಿಸುವ ಕ್ರಿಯೆಯನ್ನು ವಿವರಿಸಿ 


ಹೆಚ್ಚುವರಿ ಪ್ರಶ್ನೆಗಳು 


೧) ನೇಯುವುದು ಎಂದರೇನು ?

ಉತ್ತರ :- ಎರಡು ಗುಂಪುಗಳನ್ನು ಗಳನ್ನು ಒಟ್ಟಿಗೆ ಜೋಡಿಸಿ ಬಟ್ಟೆ ತಯಾರಿಸುವ ಕ್ರಿಯೆಯನ್ನು ನೇಯುವುದು ಎನ್ನುವರು 


೨) ಹಿಂಜುವುದು ಎಂದರೇನು ?

ಉತ್ತರ :- ಸಾಮಾನ್ಯವಾಗಿ ಒಡೆದ ಹತ್ತಿ ಕಾಯಿಗಳಿಂದ ಹತ್ತಿಯನ್ನು ಕೈಯಿಂದ ತೆಗೆಯುತ್ತಾರೆ. ಬೀಜಗಳಿಂದ ನಾರನ್ನು ಬಾಚಿ ಪ್ರತ್ಯೇಕಿಸುತ್ತದೆ ಈ ಕ್ರಿಯೆಗೆ ಹಿಂಜುವುದು ಎನ್ನುವರು 


೩) ನೈಸರ್ಗಿಕ ನಾರುಗಳು ಎಂದರೇನು ?

ಉತ್ತರ :- ಕೆಲವು ಬಟ್ಟೆಗಳ ಆದ ಹತ್ತಿ ಸೆಣಬು ರೇಷ್ಮೆ ಮತ್ತು ಉಣ್ಣೆಗಳ ನಾರುಗಳನ್ನು ಸಸ್ಯ ಮತ್ತು ಪ್ರಾಣಿಗಳಿಂದ ಪಡೆಯುತ್ತೇವೆ ಇವುಗಳನ್ನು ನೈಸರ್ಗಿಕ ನಾರುಗಳು ಎಂದು ಕರೆಯುವರು 


೪) ಸಂಶ್ಲೇಷಿತ ನಾರುಗಳು ಎಂದರೇನು ?

ಉತ್ತರ :- ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಕೃತಕವಾಗಿ ರಾಸಾಯನಿಕ ವಸ್ತುಗಳನ್ನು ತಯಾರಿಸಲಾಗುತ್ತದೆ ಇವುಗಳನ್ನು ಸಂಸ್ಥೆಗಳು ಎನ್ನುವರು 

ಉದಾಹರಣೆಗೆ ಮತ್ತು ಆಕ್ರಿಲಿಕ್ 


೫ ) ನೂಲುವುದು  ಎಂದರೇನು ?

ಉತ್ತರ :- ನಾರುಗಳಿಂದ ನೂಲನ್ನು  ತಯಾರಿಸುವ ಕ್ರಿಯೆಯನ್ನು ನೂಲುವುದು ಎನ್ನುವರು 


೬) ನೂಲಿನಿಂದ ಬಟ್ಟೆ ಯನ್ನು ತಯಾರಿಸುವ ಪ್ರಮುಖ ವಿಧಾನಗಳು ಯಾವುವು ?

ಉತ್ತರ :- ನೇಯುವುದು ಮತ್ತು ಹೆಣೆಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಚೇತನ 3/12/2025

ಥೀಮ್‌ಗಳು ೧೯೯೮: "ಕಲೆ, ಸಂಸ್ಕೃತಿ ಮತ್ತು ಸ್ವತಂತ್ರ ಬದುಕು" ೧೯೯೯: "ಹೊಸ ಸಹಸ್ರಮಾನಕ್ಕೆ ಎಲ್ಲರಿಗೂ ಲಭ್ಯತೆ" 2000: "ಮಾಹ...