ಅಗಸ್ಟ್ ತಿಂಗಳಲ್ಲಿ ಬೋಧಿಸಬೇಕಾದ ಪರಿಸರ ಅಧ್ಯಯನ
ಹಾಗೂ ವಿಜ್ಞಾನ ಪಾಠಗಳು ಮತ್ತು ಕಾರ್ಯ ಚಟುವಟಿಕೆಗಳ ವಿವರ.
Click on below link 👇
ಅಧ್ಯಾಯ 4
ಉಷ್ಣ
ಅಭ್ಯಾಸಗಳು
1. ಪ್ರಯೋಗ ಶಾಲಾ ತಾಪಮಾಪಕ ಮತ್ತು ವೈದ್ಯಕೀಯ ತಾಪಮಾಪಕಗಳ ನಡುವಣ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ತಿಳಿಸಿ.
ಹೋಲಿಕೆ
ಎರಡೂ ತಾಪಮಾಪಕಗಳು ತಾಪವನ್ನು ಅಳೆಯುವ ಸಾಧನಗಳಾಗಿವೆ. ಎರಡೂ ತಾಪಮಾಪಕ ಗಳಲ್ಲಿ ಪಾದರಸದ ಬುರುಡೆ ಇರುತ್ತದೆ. ತಾಪಕ್ಕೆ ಸರಿಯಾಗಿ ಪಾದರಸವೂ ಏರುತ್ತಾ ಹೋಗುತ್ತದೆ.
ವ್ಯತ್ಯಾಸ
ವೈದ್ಯಕೀಯ ತಾಪಮಾಪಕವು ಕೇವಲ ಮನುಷ್ಯರ ತಾಪವನ್ನು ಅಳೆಯಲು ಉಪಯೋಗಿಸಲ್ಪಡುತ್ತದೆ. ಪ್ರಯೋಗ ಶಾಲಾ ತಾಪಮಾಪಕವು ವಸ್ತುಗಳ ತಾಪವನ್ನು ಅಳೆಯಲು ಉಪಯೋಗಿಸಲಾಗುತ್ತದೆ.
ವೈದ್ಯಕೀಯ ತಾಪಮಾಪಕದಲ್ಲಿ ಬುರುಡೆಯ ಹತ್ತಿರ ಒಂದು ವಕ್ರತೆ ಇರುತ್ತದೆ ಆದರೆ ಪ್ರಯೋಗಶಾಲಾ ತಾಪಮಾಪಕದಲ್ಲಿಇರುವುದಿಲ್ಲ.
ವೈದ್ಯಕೀಯ ತಾಪಮಾಪಕದಲ್ಲಿ 35°Cನಿಂದ 42°C ವರೆಗೆ ಮತ್ತು ಪ್ರಯೋಗಶಾಲಾ ತಾಪಮಾಪಕದಲ್ಲಿ -10°C ನಿಂದ 110° C ವರೆಗೆ ತಾಪವನ್ನು ಅಳೆಯಬಹುದು.
2, ಉಷ್ಣವಾಹಕಗಳು ಮತ್ತು ಅವಾಹಕಗಳಿಗೆ ತಲಾ ಎರಡು ಉದಾಹರಣೆ ನೀಡಿ.
ಉಷ್ಣವಾಹಕಗಳು……. ಕಬ್ಬಿಣ, ತಾಮ್ರ
ಅವಹಕಗಳು………….. ಪ್ಲಾಸ್ಟಿಕ್, ಒಣಗಿದ ಮರ.
13. ಬಿಟ್ಟ ಸ್ಥಳಗಳನ್ನು ತುಂಬಿ
(ಎ) ವಸ್ತುವಿನ ಉಷ್ಣತೆಯ ಮಟ್ಟವನ್ನು ನಿರ್ಧರಿಸುವುದು ಅದರ ತಾಪ.
(ಬಿ) ಕುದಿಯುವ ನೀರಿನ ತಾಪವನ್ನು ವೈದ್ಯಕೀಯ ತಾಪಮಾಪಕದಿಂದ ಅಳೆಯಲು ಸಾಧ್ಯವಿಲ್ಲ.
(ಸಿ) ತಾಪವನ್ನು ಡಿಗ್ರಿ ಸೆಲ್ಸಿಯಸ್ ನಿಂದ ಅಳೆಯುವರು.
(ಡಿ) ಉಷ್ಣವು ಪ್ರಸಾರವಾಗಲು ಯಾವುದೇ ಮಾಧ್ಯಮದ ಅಗತ್ಯವಿಲ್ಲದ ವಿಧಾನ ಉಷ್ಣ ವಿಕಿರಣ.
(ಇ) ಬಿಸಿ ಹಾಲಿನ ಲೋಟದಲ್ಲಿ ಅದ್ದಿದ ಒಂದು ತಣ್ಣನೆಯ ಸ್ಟೀಲ್ ಚಮಚ ತನ್ನ ಇನ್ನೊಂದು ತುದಿಗೆ ಉಷ್ಣ ಪ್ರಸಾರ ಮಾಡುವ ವಿಧಾನ ಉಷ್ಣ ವಹನ.
(ಎಫ್) ತಿಳಿಯಾದ ಬಣ್ಣದ ಬಟ್ಟೆಗಳಿಗಿಂತ ದಟ್ಟವಾದ ಬಣ್ಣದ ಬಟ್ಟೆಗಳು ಹೆಚ್ಚು ಉಷ್ಣವನ್ನು ಹೀರುವ ಬಟ್ಟೆಗಳು ಬಣ್ಣದ್ದಾಗಿರುತ್ತವೆ.
4. ಈ ಕೆಳಗಿನವುಗಳನ್ನು ಹೊಂದಿಸಿ
(1) ನೆಲಗಾಳಿ ಬೀಸುವ ಕಾಲ…………… ರಾತ್ರಿ
(ii) ಕಡಲ್ಗಾಳಿ ಬೀಸುವ ಕಾಲ…………. ಹಗಲು
(iii) ದಟ್ಟವಾದ ಬಣ್ಣದ ಬಟ್ಟೆಗಳನ್ನು ತೊಡಲು ಇಚ್ಛಿಸುವ ಕಾಲ……. ಚಳಿಗಾಲ
(iv) ತಿಳಿಯಾದ ಬಣ್ಣದ ಬಟ್ಟೆಗಳನ್ನು ತೊಡಲು ಇಚ್ಚಿಸುವ ಕಾಲ……… ಬೇಸಿಗೆಕಾಲ
5. ಚಳಿಗಾಲದಲ್ಲಿ ಒಂದೇ ಪದರದ ದಪ್ಪ ಬಟ್ಟೆಯನ್ನು ಧರಿಸುವುದಕ್ಕಿಂತ ಹಲವು ಪದರುಗಳ ಬಟ್ಟೆ ಧರಿಸುವುದು ನಮ್ಮನ್ನು ಬೆಚ್ಚಗೆ ಇಡುತ್ತದೆ ಏಕೆ? ಚರ್ಚಿಸಿ.
ಹಲವು ಪದರುಗಳ ಬಟ್ಟೆಗಳ ನಡುವೆ ಗಾಳಿ ಸೇರಿರುತ್ತದೆ. ಗಾಳಿಯು ಅವಾಹಕವಾದರಿಂದ ಅದು ಹೊರಗಿನ ಚಳಿಯನ್ನು ಒಳಗೆ ಬಿಡುವುದಿಲ್ಲ ಮತ್ತು ದೇಹದ ಶಾಖವನ್ನು ಹೊರಗೆ ಬಿಡುವುದಿಲ್ಲ ಹಾಗಾಗಿ ಹಲವು ಪದರುಗಳ ಬಟ್ಟೆ ಧರಿಸುವುದು ನಮ್ಮನ್ನು ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತದೆ.
16. ಚಿತ್ರ 4,13ನ್ನು ನೋಡಿ. ವಹನ, ಸಂವಹನ ಮತ್ತು ವಿಕಿರಣದಿಂದ ಉಷ್ಣ ಪ್ರಸಾರವಾಗುತ್ತಿದೆ ಗುರುತು ಮಾಡಿ.
(i) ಬರ್ನರ್‌ನಿಂದ ಪ್ಯಾನ್‌ಗೆ ಶಾಖದ ವರ್ಗಾವಣೆ ವಿಕಿರಣದ ಮೂಲಕ.
(ii) ಶಾಖವನ್ನು ಪ್ಯಾನ್‌ನಿಂದ ನೀರಿಗೆ ವರ್ಗಾಯಿಸುವುದು ವಹನದ ಮೂಲಕ.
(iii) ನೀರಿನೊಳಗೆ ಶಾಖದ ವರ್ಗಾವಣೆಯು ಸಂವಹನದ ಮೂಲಕ.
7. ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಮನೆಗಳ ಹೊರಗೋಡೆಗಳಿಗೆ ಬಿಳಿ ಬಣ್ಣ ಬಳಿಯುವುದು. ಸೂಕ್ತ. ವಿವರಿಸಿ.
ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಹೆಚ್ಚು ಉಷ್ಣವು ಮನೆಯೊಳಗೆ ಬಾರದಂತೆ ತಡೆಯಬೇಕಾಗಿರುತ್ತದೆ. ಬಿಳಿ ಬಣ್ಣವು ಉಷ್ಣವನ್ನು ಹೀರಿಕೊಳ್ಳದೆ ಉಷ್ಣವನ್ನು ಪ್ರತಿಫಲಿಸುತ್ತದೆ.ಆದರೆ ದಟ್ಟವಾದ ಬಣ್ಣವು ಉಷ್ಣವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಬಿಳಿಯ ಬಣ್ಣವನ್ನು ಬಳಿಯುವುದರಿಂದ ಗೋಡೆಗಳು ಹೆಚ್ಚು ಬಿಸಿಯಾಗದೆ ಮನೆಗಳು ತಂಪಾಗಿರುತ್ತವೆ. ಆದ್ದರಿಂದ ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಗೋಡೆಗಳಿಗೆ ಬಿಳಿಯ ಬಣ್ಣವನ್ನು ಬಳಿಯುತ್ತಾರೆ.
8. 30°Cನ ಒಂದು ಲೀಟರ್ ನೀರನ್ನು 50°C ನ ಒಂದು ಲೀಟರ್ ನೀರಿನೊಂದಿಗೆ ಬೆರೆಸಿದೆ. ಈ ಸಂದರ್ಭದಲ್ಲಿ ಮಿಶ್ರಣದ ತಾಪ ಎಷ್ಟಿರುತ್ತದೆ?
(ಎ) 80°C
(ಬಿ) 50°C ಗಿಂತ ಹೆಚ್ಚು, 80°C ಗಿಂತ ಕಡಿಮೆ
(ಸಿ) 20°C
(ಡಿ) 30°C ನಿಂದ 50°C ನಡುವೆ.
ಉತ್ತರ (ಡಿ) 30°C ನಿಂದ 50°C ನಡುವೆ.
9. 40°C ನ ಒಂದು ಕಬ್ಬಿಣದ ಗುಂಡನ್ನು 40°C ನ ನೀರಿರುವ ಪಾತ್ರೆಗೆ ಹಾಕಿದರೆ ಉಷ್ಣವು
(ಎ) ಕಬ್ಬಿಣದ ಗುಂಡಿನಿಂದ ನೀರಿಗೆ ಹರಿಯುತ್ತದೆ.
(ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.
(ಸಿ) ನೀರಿನಿಂದ ಕಬ್ಬಿಣದ ಗುಂಡಿಗೆ ಹರಿಯುತ್ತದೆ.
(ಡಿ) ಎರಡರ ತಾಪವೂ ಹೆಚ್ಚಾಗುತ್ತದೆ.
ಉತ್ತರ: (ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.
10. ಮರದ ಚಮಚವನ್ನು ಒಂದು ಕಪ್ ಐಸ್‌ಕ್ರೀಮ್‌ನಲ್ಲಿ ಅದ್ದಿದಾಗ ಅದರ ಇನ್ನೊಂದು ತುದಿ
(ಎ) ವಹನ ಕ್ರಿಯೆಯಿಂದ ತಣ್ಣಗಾಗುತ್ತದೆ.
(ಬಿ) ಸಂವಹನ ಕ್ರಿಯೆಯಿಂದ ತಣ್ಣಗಾಗುತ್ತದೆ;
(ಸಿ) ವಿಕಿರಣ ಕ್ರಿಯೆಯಿಂದ ತಣ್ಣಗಾಗುತ್ತದೆ.
(ಡಿ) ತಣ್ಣಗಾಗುವುದಿಲ್ಲ.
ಉತ್ತರ: (ಡಿ) ತಣ್ಣಗಾಗುವುದಿಲ್ಲ.
II. ಸಾಮಾನ್ಯವಾಗಿ ಕಲೆರಹಿತ ಉಕ್ಕಿನ (stainless steel) ಬಾಣಲೆಗಳಿಗೆ ತಾಮ್ರದ ತಳ ಕಟ್ಟುವರು, ಇದಕ್ಕೆ ಕಾರಣ
(ಎ) ತಾಮ್ರದ ತಳವು ಬಾಣಲೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
(ಬಿ) ಇಂತಹ ಬಾಣಲೆಗಳು ಬಣ್ಣ ಬಣ್ಣವಾಗಿ ಕಾಣಿಸುತ್ತವೆ.
(ಸಿ) ತಾಮ್ರವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.
(ಡಿ) ಕಲೆರಹಿತ ಉಕ್ಕಿಗಿಂತ ತಾಮ್ರವನ್ನು ಸ್ವಚ್ಛಗೊಳಿಸುವುದು ಸುಲಭ,
ಉತ್ತರ: (ಸಿ) ತಾಮ್ರವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.
ಅಧ್ಯಾಯ 3
ಅಧ್ಯಾಯ 3
ಎಳೆಯಿಂದ ಬಟ್ಟೆ
ಈ ಕೆಳಗಿನವುಗಳಿಗೆ ಉತ್ತರಿಸಿ :
(ಎ) ಕರಿಕುರಿಯ ದೇಹದ ಯಾವ ಭಾಗಗಳು ಉಣ್ಣೆಯನ್ನು ಹೊಂದಿವೆ?
ಕಪ್ಪು ಕುರಿಗಳ ಚರ್ಮವು ಮುಖ್ಯವಾಗಿ ಹಿಂಭಾಗ ಮತ್ತು ಹೊಟ್ಟೆಯಲ್ಲಿ ಉಣ್ಣೆಯಂತಹ ತುಪ್ಪಳವನ್ನು ಹೊಂದಿರುತ್ತದೆ. ಇದನ್ನು ಉಣ್ಣೆ ಎಂದು ಕರೆಯಲಾಗುತ್ತದೆ.
(ಬಿ) ಕುರಿಮರಿಯ ಬಿಳಿ ತುಪ್ಪಳ ಯಾವುದರಿಂದ ಉಂಟಾಗಿದೆ?
ಕುರಿಮರಿಯ ಬಿಳಿ ಉಣ್ಣೆಯು ಕುರಿಮರಿಯ ಶುದ್ಧ ಬಿಳಿ ಬಣ್ಣದ ಕೂದಲುಳ್ಳ ಚರ್ಮವನ್ನು ಸೂಚಿಸುತ್ತದೆ.
2. ರೇಷ್ಮೆ ಹುಳುವು ಒಂದು (ಎ) ಕಂಬಳಿಹುಳು (ಬಿ) ಲಾರ್ವ. ಈ ಪರ್ಯಾಯಗಳಿಂದ ಸರಿಯಾದುದನ್ನು ಆರಿಸಿ.
(i) ಎ(ii) ಬಿ (iii) ಎ ಮತ್ತು ಬಿ (iv) ಎ ಅಥವಾ ಬಿ ಎರಡೂ ಅಲ್ಲ
ಉತ್ತರ:(iii) ಎ ಮತ್ತು ಬಿ
3. ಈ ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ?
(i) ಯಾಕ್ (ii) ಒಂಟೆ (iii) ಮೇಕೆ (iv) ಜೂಲು ನಾಯಿ
ಉತ್ತರ : (iv)ಜೂಲು ನಾಯಿ
4. ಈ ಕೆಳಗಿನ ಪದಗಳ ಅರ್ಥವೇನು?
(i) ಸಾಕಣೆ (ii) ಕತ್ತರಿಸುವಿಕೆ (iii) ರೇಷ್ಮೆಕೃಷಿ
(i) ಸಾಕಣೆ: ಪ್ರಪಂಚದ ಬಹಳಷ್ಟು ಕಡೆ ಪ್ರಾಣಿಗಳನ್ನು ವಿವಿಧ ಉದ್ದೇಶಗಳಿಗಾಗಿ ಸಾಕಲಾಗುತ್ತದೆ ಮತ್ತು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಇದನ್ನೇ ಸಾಕಣೆ ಎನ್ನುವರು.
(ii) ಕತ್ತರಿಸುವಿಕೆ: ಕುರಿಯ ಮೈಯಿಂದ ತುಪ್ಪಳವನ್ನು ಅತ್ಯಂತ ತೆಳುವಾದ ಚರ್ಮದೊಂದಿಗೆ ಬೇರ್ಪಡಿಸಲಾಗುತ್ತದೆ ಈ ಕ್ರಿಯೆಯನ್ನು ಕತ್ತರಿಸುವಿಕೆ ಎನ್ನುವರು. ಇಲ್ಲಿ ಕೂದಲನ್ನು ಬೋಳಿಸಲು ಕ್ಷೌರಿಕರು ಬಳಸುವಂತಹ ಯಂತ್ರಗಳನ್ನು ಬಳಸಲಾಗುತ್ತದೆ.
(iii) ರೇಷ್ಮೆಕೃಷಿ: ರೇಷ್ಮೆಗಾಗಿ ರೇಷ್ಮೆ ಹುಳುಗಳನ್ನು ಸಾಕುವುದನ್ನು ರೇಷ್ಮೆ ಕೃಷಿ ಎನ್ನುವರು.
5. ಉಣ್ಣೆ ಸಂಸ್ಕರಣೆಯ ಹಂತಗಳ ಶ್ರೇಣಿಯನ್ನು ಈ ಕೆಳಗೆ ನೀಡಿದೆ. ಬಿಟ್ಟು ಹೋಗಿರುವ ಹಂತಗಳು ಯಾವುವು? ಅವುಗಳನ್ನು ಸೇರಿಸಿ,
ಕತ್ತರಿಸುವುದು,ಶುಭ್ರಗೊಳಿಸುವುದು,ವಿಂಗಡಿಸುವುದು, ಪುರುಳೆಗಳನ್ನು ಸ್ವಚ್ಛಗೊಳಿಸುವುದು, ಬಣ್ಣ ಹಾಕುವುದು, ಸುತ್ತುವುದು.
6. ರೇಷ್ಮೆ ಪತಂಗದ ಜೀವನ ಚರಿತ್ರೆಯಲ್ಲಿ, ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿದ ಎರಡು ಹಂತಗಳ ಚಿತ್ರಗಳನ್ನು ಬರೆಯಿರಿ.
7. ಈ ಕೆಳಗಿನವುಗಳಲ್ಲಿ ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿರುವ ಎರಡು ಪದಗಳು ಯಾವುವು?
ರೇಷ್ಮೆಕೃಷಿ, ಪುಷ್ಪಕೃಷಿ, ಹಿಪ್ಪುನೇರಳೆಕೃಷಿ, ಜೇನುಕೃಷಿ, ವೃಕ್ಷಕೃಷಿ
ಸುಳಿವುಗಳು :
(ಎ) ರೇಷ್ಮೆಕೃಷಿಯು ಹಿಪ್ಪುನೇರಳೆ ಎಲೆ ವ್ಯವಸಾಯ ಮತ್ತು ರೇಷ್ಮೆಹುಳಗಳ ಸಾಕಣೆಯನ್ನು ಒಳಗೊಂಡಿದೆ.
(ಬಿ) ಹಿಪ್ಪುನೇರಳೆಯ ವೈಜ್ಞಾನಿಕ ಹೆಸರು ಮೋರಸ್ ಆಲ್ಬ.
ಉತ್ತರ: ರೇಷ್ಮೆ ಕೃಷಿ ,ಹಿಪ್ಪು ನೇರಳೆ ಕೃಷಿ.
8. ಕಾಲಂ – 1 ರ ಪದಗಳನ್ನು ಕಾಲಂ – ಪದಗಳೊಂದಿಗೆ ಹೊಂದಿಸಿ :
1. ಉಜ್ಜಿ ಶುಭ್ರಗೊಳಿಸುವುದು……(b) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
2. ಹಿಪ್ಪುನೇರಳೆ ಎಲೆಗಳು…..(c) ರೇಷ್ಮೆಹುಳುಗಳ ಆಹಾರ
3. ಯಾಕ್ ………(d)ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
4. ರೇಷ್ಮೆಗೂಡು………(a) ರೇಷ್ಮೆ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.
ಈ ಅಧ್ಯಾಯವನ್ನು ಆಧರಿಸಿ ಪದಬಂಧವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಕೆಳಗಿನ ಸುಳಿವುಗಳನ್ನು ಉಪಯೋಗಿಸಿ, ಸೂಕ್ತ ಪದಗಳನ್ನು ಗುರ್ತಿಸಿ,
ಮೇಲಿನಿಂದ ಕೆಳಕ್ಕೆ
ಎಡದಿಂದ ಬಲಕ್ಕೆ
1. ಚೆನ್ನಾಗಿ ತೊಳೆಯವುದು,
2. ಪ್ರಾಣಿ ಜನ್ಯ ಎಳೆ,
3. ಉದ್ದವಾದ ದಾರದಂತಹ ರಚನೆ .
4. ಬೆಚ್ಚಗಿಡುತ್ತದೆ.
5. ಇದರ ಎಲೆಗಳು ರೇಷ್ಮೆಹುಳುಗಳಿಂದ ತಿನ್ನಲ್ಪಡುತ್ತವೆ.
6. ಹುಳುವಿನ ಮೊಟ್ಟೆಯೊಡೆದು ಹೊರಬರುತ್ತದೆ.
ಅಧ್ಯಾಯ 2.
1. ಬಿಟ್ಟ ಸ್ಥಳ ತುಂಬಿ :
(ಎ) ಮಾನವನ ಪೋಷಣೆಯ ಪ್ರಮುಖ ಹಂತಗಳು ಆಹಾರ ಸೇವನೆ, ಜೀರ್ಣಕ್ರಿಯೆ, ಹೀರಿಕೆ, ಸ್ವಾಂಗೀಕರಣ ಮತ್ತು ವಿಸರ್ಜನೆ.
(ಬಿ) ಮನುಷ್ಯನ ದೇಹದಲ್ಲಿ ಅತ್ಯಂತ ದೊಡ್ಡ ಗ್ರಂಥಿ ಯಕೃತ್
(ಸಿ) ಆಹಾರದ ಮೇಲೆ ಕ್ರಿಯೆ ನಡೆಸುವ ಹೈಡೋಕ್ಲೋರಿಕ್ ಆಮ್ಲ ಮತ್ತು ಜೀರ್ಣ ರಸಗಳನ್ನು ಜಠರವು ಬಿಡುಗಡೆ ಮಾಡುತ್ತದೆ.
(ಡಿ) ಸಣ್ಣ ಕರುಳಿನ ಒಳಭಿತ್ತಿಯು ವಿಲ್ಲೈ ಎಂಬ ಹಲವಾರು ಬೆರಳಿನಂತಹ ರಚನೆಗಳನ್ನು ಹೊಂದಿದೆ.
(ಇ) ಅಮೀಬಾವು ತನ್ನ ಆಹಾರವನ್ನು ಆಹಾರ ರಸದಾನಿಯಲ್ಲಿ ಜೀರ್ಣಿಸುತ್ತದೆ.
2. ಕೆಳಗಿನ ವಾಕ್ಯಗಳು ಸರಿ ಇದ್ದರೆ ಸರಿ ಎಂದು ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.
(ಎ) ಪಿಷ್ಟದ ಜೀರ್ಣಕ್ರಿಯೆಯು ಜಠರದಲ್ಲಿ ಪ್ರಾರಂಭವಾಗುತ್ತದೆ. (ಸರಿ/ತಪ್ಪು)
ಉತ್ತರ: ತಪ್ಪು.
(ಬಿ) ನಾಲಿಗೆಯು ಆಹಾರವನ್ನು ಲಾಲಾರಸದೊಂದಿಗೆ ಸೇರಿಸಲು ಸಹಾಯ ಮಾಡುತ್ತದೆ.(ಸರಿ/ತಪ್ಪು)
ಉತ್ತರ: ಸರಿ
(ಸಿ) ಪಿತ್ತಕೋಶವು ತಾತ್ಕಾಲಿಕವಾಗಿ ಪಿತ್ತರಸವನ್ನು ಹಿಡಿದಿಟ್ಟುಕೊಂಡಿರುತ್ತದೆ. (ಸರಿ/ತಪ್ಪು)
ಉತ್ತರ :ಸರಿ
(ಡಿ) ಮೆಲುಕು ಹಾಕುವ ಪ್ರಾಣಿಗಳು ನುಂಗಿರುವ ಹುಲ್ಲನ್ನು ಬಾಯಿಗೆ ಪುನಃ ತಂದುಕೊಳ್ಳುತ್ತವೆ ಮತ್ತು ಅದನ್ನು ಸ್ವಲ್ಪ ಸಮಯದವರೆಗೆ ಜಗಿಯುತ್ತವೆ. (ಸರಿ/ತಪ್ಪು)
ಉತ್ತರ: ಸರಿ
3. ಕೆಳಗೆ ಕೊಟ್ಟಿರುವ ಪ್ರತಿಯೊಂದು ವಾಕ್ಯಕ್ಕೆ ಸರಿ ಉತ್ತರವನ್ನು (✓) ಚಿಹ್ನೆಯಿಂದ ಗುರ್ತಿಸಿ.
(ಎ) ಕೊಬ್ಬು ಸಂಪೂರ್ಣವಾಗಿ ಇಲ್ಲಿ ಜೀರ್ಣಗೊಳ್ಳುತ್ತದೆ.
(i) ಜಠರ (i) ಬಾಯಿ (iii) ಸಣ್ಣ ಕರುಳು (iv) ದೊಡ್ಡ ಕರುಳು
ಉತ್ತರ: ಸಣ್ಣ ಕರುಳು
(ಬಿ) ಜೀರ್ಣಗೊಳ್ಳದ ಆಹಾರದಿಂದ ನೀರು ಮುಖ್ಯವಾಗಿ ಇಲ್ಲಿ ಹೀರಲ್ಪಡುತ್ತದೆ.
(i) ಜಠರ (ii) ಅನ್ನನಾಳ (iii) ಸಣ್ಣ ಕರುಳು (iv) ದೊಡ್ಡ ಕರುಳು
ಉತ್ತರ :ದೊಡ್ಡ ಕರುಳು
4. ಕಾಲಂ – 1 ರಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ – II ರಲ್ಲಿ ಕೊಟ್ಟಿರುವ ಸೂಕ್ತ ಅಂಶಗಳೊಂದಿಗೆ ಹೊಂದಿಸಿ :
ಆಹಾರದ ಘಟಕಗಳು…ಜೀರ್ಣಕ್ರಿಯೆಯ ಉತ್ಪನ್ನಗಳು
ಕಾರ್ಬೊಹೈಡೇಟ್‌ಗಳು…….ಸಕ್ಕರೆ
ಪ್ರೊಟೀನ್‌ಗಳು…….ಅಮೈನೊ ಆಮ್ಲಗಳು
ಕೊಬ್ಬು……..ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್
5. ವಿಲ್ಲೈಗಳೆಂದರೇನು? ಅವುಗಳು ಎಲ್ಲಿವೆ ಮತ್ತು ಅವುಗಳ ಕಾರ್ಯವೇನು?
ಉತ್ತರ
ಸಣ್ಣ ಕರುಳಿನ ಒಳಭಿತ್ತಿಯು ವಿಲ್ಲೈ ಎಂಬ ಹಲವಾರು ಬೆರಳಿನಂತಹ ರಚನೆಗಳನ್ನು ಹೊಂದಿದೆ. ಅವುಗಳು ಜೀರ್ಣವಾದ ಆಹಾರವನ್ನು ಹೀರುವ ಕೆಲಸ ಮಾಡುತ್ತವೆ.
6. ಪಿತ್ತರಸವು ಎಲ್ಲಿ ಉತ್ಪತ್ತಿಯಾಗುತ್ತದೆ? ಆಹಾರದ ಯಾವ ಘಟಕವನ್ನು ಜೀರ್ಣಿಸಲು ಸಹಾಯ ಮಾಡುತ್ತದೆ?
ಉತ್ತರ:
ಪಿತ್ತರಸವು ಯಕೃತ್ ಎಂಬ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಈ ರಸವು ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಜೀರ್ಣಿಸಲು ಸಹಾಯ ಮಾಡುತ್ತದೆ.
7. ಮನುಷ್ಯರಿಂದ ಜೀರ್ಣಿಸಲು ಆಗದ, ಆದರೆ ಮೆಲುಕು ಹಾಕುವ ಪ್ರಾಣಿಗಳಿಂದ ಜೀರ್ಣಿಸಲಾಗುವ ಕಾರ್ಬೊಹೈಡ್ರೆಟ್‌ನ ವಿಧವನ್ನು ಹೆಸರಿಸಿ.ಇದಕ್ಕೆ ಕಾರಣವೇನೆಂಬುದನ್ನೂ ತಿಳಿಸಿ.
ಉತ್ತರ : ಸೆಲ್ಲ್ಯುಲೋಸ್ ಎಂಬ ಕಾರ್ಬೋಹೈಡ್ರೇಟನ್ನು ಮನುಷ್ಯರಿಂದ ಜೀವಿಸಲು ಸಾಧ್ಯವಿಲ್ಲ ಆದರೆ ಮೆಲುಕು ಹಾಕುವ ಪ್ರಾಣಿಗಳು ಇದನ್ನು ಜೀರ್ಣಿಸುತ್ತವೆ.
8. ನಮಗೆ ಗ್ಲೂಕೋಸ್‌ನಿಂದ ತಕ್ಷಣ ಶಕ್ತಿ ಸಿಗುವುದು, ಏಕೆ?
ಉತ್ತರ:ಗ್ಲುಕೋಸ್ ಇದು ಅತ್ಯಂತ ಸರಳವಾದ, ಈಗಾಗಲೇ ಜೀರ್ಣವಾದ ಆಹಾರ ಪದಾರ್ಥವಾಗಿದೆ. ಇದನ್ನು ಸೇವಿಸಿದ ಕೂಡಲೇ, ನೇರವಾಗಿ ದೇಹದಿಂದ ಹೀರಲ್ಪಟ್ಟು ಬೇಗ ಶಕ್ತಿ ಬಿಡುಗಡೆಯಾಗುತ್ತದೆ.
19. ಜೀರ್ಣನಾಳದ ಯಾವ ಭಾಗವು ಇದರಲ್ಲಿ ಭಾಗಿಯಾಗಿದೆ?
(i) ಆಹಾರ ಹೀರಿಕೆ……. ಸಣ್ಣ ಕರುಳಿನ ವಿಲ್ಲೈಗಳು
(ii) ಆಹಾರವನ್ನು ಜಗಿಯುವುದು…… ಬಾಯಿಯಲ್ಲಿನ ಹಲ್ಲುಗಳು
(iii) ಬ್ಯಾಕ್ಟಿರಿಯಾಗಳನ್ನು ಕೊಲ್ಲುವುದು….. ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ.
(v) ಮಲ ಉತ್ಪತ್ತಿ…….. ದೊಡ್ಡ ಕರುಳು
10. ಪೋಷಣೆಯಲ್ಲಿ ಮನುಷ್ಯ ಹಾಗೂ ಅಮೀಬಾಕ್ಕಿರುವ ಒಂದು ಹೋಲಿಕೆ ಮತ್ತು ಒಂದು ವ್ಯತ್ಯಾಸವನ್ನು ಬರೆಯಿರಿ.
ಹೋಲಿಕೆ
ಅಮೀಬಾ ಮತ್ತು ಮಾನವರು ಇಬ್ಬರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಸ್ಯಗಳಿಂದ ಆಹಾರವನ್ನು ಪಡೆಯುತ್ತವೆ ಆದ್ದರಿಂದ, ಈ ಎರಡೂ ಜೀವಿಗಳು ಪರಪೋಷಕಗಳಾಗಿವೆ.
ವ್ಯತ್ಯಾಸ
ಮನುಷ್ಯರು ಬಾಯಿ ಮತ್ತು ಸಂಕೀರ್ಣ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿದ್ದಾರೆ.
ಆದರೆ ಅಮೀಬಾವು ಬಾಯಿ ಮತ್ತು ಸಂಕೀರ್ಣ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿಲ್ಲ.
11. ಕಾಲಂ 1 ರಲ್ಲಿರುವ ಅಂಶಗಳನ್ನು ಕಾಲಂ – IIರ ಸೂಕ್ತ ಅಂಶಗಳೊಂದಿಗೆ ಹೊಂದಿಸಿ:
(ಎ) ಲಾಲಾರಸ ಗ್ರಂಥಿ…..(iii) ಲಾಲಾರಸ ಸ್ರವಿಕೆ
(ಬಿ)ಜಠರ…..(iv), ಆಮ್ಲ ಬಿಡುಗಡೆ
(ಸಿ)ಯಕೃತ್…….(i). ಪಿತ್ತರಸ ಸವಿಕೆ
(ಡಿ) ಗುದನಾಳ…..(vii) ಮಲ ವಿಸರ್ಜನೆ
(ಇ)ಸಣ್ಣ ಕರುಳು….. (iv) ಆಹಾರದ ಸಂಪೂರ್ಣ ಜೀರ್ಣಕ್ರಿಯೆ
(ಎಫ್) ದೊಡ್ಡ ಕರುಳು……(vi) ನೀರಿನ ಹೀರಿಕೆ
12. ಚಿತ್ರ 2.11 ರ ಜೀರ್ಣಾಂಗ ವ್ಯವಸ್ಥೆಯ ಭಾಗಗಳನ್ನು ಗುರ್ತಿಸಿ.
13, ನಾವು ಕೇವಲ ಹಸಿಸೊಪ್ಪು, ತರಕಾರಿ ಅಥವಾ ಹುಲ್ಲನ್ನು ಅವಲಂಬಿಸಿ ಬದುಕಬಹುದೇ?
ಇಲ್ಲ. ಮನುಷ್ಯರು ಹಸಿ, ಎಲೆಗಳ ತರಕಾರಿಗಳು ಅಥವಾ ಹುಲ್ಲಿನ ಮೇಲೆ ಮಾತ್ರ ಬದುಕಲು ಸಾಧ್ಯವಿಲ್ಲ. ಏಕೆಂದರೆ ಹುಲ್ಲಿನಲ್ಲಿ ಸೆಲ್ಯುಲೋಸ್ ಸಮೃದ್ಧವಾಗಿದೆ.
ಸೆಲ್ಯುಲೋಸ್-ಜೀರ್ಣಗೊಳಿಸುವ ಕಿಣ್ವಗಳ ಅನುಪಸ್ಥಿತಿಯಿಂದಾಗಿ ಮಾನವರು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರ್ಬೋಹೈಡ್ರೇಟ್ ಆಗಿದೆ.
FLN PPT
👉 FLN ಮಾಹಿತಿ ಹಾಗೂ ಗುರಿ ಉದ್ದೇಶಗಳು
👉 ಸಚೇತನ - ಕಲಿಕಾ ಫಲಗಳ ಆಧಾರಿತ ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನ ಸಾಹಿತ್ಯ
FLN ಕ್ರಿಯಾ ಯೋಜನೆಗಳು
👉 FLN ಕನ್ನಡ ಇಂಗ್ಲೀಷ್ ಗಣಿತ ಕ್ರಿಯಾ ಯೋಜನೆ
ಅಭ್ಯಾಸ ಚಟುವಟಿಕೆಗಳು ಮತ್ತು ಚಟುವಟಿಕೆ ಹಾಳೆಗಳು
ಜನನ ಮತ್ತು ಬಾಲ್ಯ ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ . ಇದು ಈಗ ಸರ್ವಜ್ಞನ ಅಬಲೂರು ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂ...