✨ ಜ್ಞಾನಕ್ಕಾಗಿ *ಜ್ಞಾನ ಸೌರಭ* ( JNANA SOURABHA ) YOUTUBE CHANNEL SUBSCRIBE ಮಾಡಿಕೊಳ್ಳಿ ✨ SHARE ಮಾಡಿ ✨ .....✨. ಶಿಕ್ಷಣದ ದೀಪ ಬೆಳಗಲಿ, ಜ್ಞಾನದ ಜ್ಯೋತಿ ಪ್ರಕಾಶಿಸಲಿ ✨

ಮಂಗಳವಾರ, ಜುಲೈ 16, 2024

 ಅಧ್ಯಾಯ 4

ಉಷ್ಣ

ಅಭ್ಯಾಸಗಳು

1. ಪ್ರಯೋಗ ಶಾಲಾ ತಾಪಮಾಪಕ ಮತ್ತು ವೈದ್ಯಕೀಯ ತಾಪಮಾಪಕಗಳ ನಡುವಣ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ತಿಳಿಸಿ.
ಹೋಲಿಕೆ

ಎರಡೂ ತಾಪಮಾಪಕಗಳು ತಾಪವನ್ನು ಅಳೆಯುವ ಸಾಧನಗಳಾಗಿವೆ. ಎರಡೂ ತಾಪಮಾಪಕ ಗಳಲ್ಲಿ ಪಾದರಸದ ಬುರುಡೆ ಇರುತ್ತದೆ. ತಾಪಕ್ಕೆ ಸರಿಯಾಗಿ ಪಾದರಸವೂ ಏರುತ್ತಾ ಹೋಗುತ್ತದೆ.

ವ್ಯತ್ಯಾಸ
ವೈದ್ಯಕೀಯ ತಾಪಮಾಪಕವು ಕೇವಲ ಮನುಷ್ಯರ ತಾಪವನ್ನು ಅಳೆಯಲು ಉಪಯೋಗಿಸಲ್ಪಡುತ್ತದೆ. ಪ್ರಯೋಗ ಶಾಲಾ ತಾಪಮಾಪಕವು ವಸ್ತುಗಳ  ತಾಪವನ್ನು ಅಳೆಯಲು ಉಪಯೋಗಿಸಲಾಗುತ್ತದೆ.

ವೈದ್ಯಕೀಯ ತಾಪಮಾಪಕದಲ್ಲಿ ಬುರುಡೆಯ ಹತ್ತಿರ ಒಂದು ವಕ್ರತೆ ಇರುತ್ತದೆ ಆದರೆ ಪ್ರಯೋಗಶಾಲಾ ತಾಪಮಾಪಕದಲ್ಲಿಇರುವುದಿಲ್ಲ.

ವೈದ್ಯಕೀಯ ತಾಪಮಾಪಕದಲ್ಲಿ 35°Cನಿಂದ  42°C ವರೆಗೆ ಮತ್ತು ಪ್ರಯೋಗಶಾಲಾ ತಾಪಮಾಪಕದಲ್ಲಿ -10°C ನಿಂದ 110° C ವರೆಗೆ ತಾಪವನ್ನು ಅಳೆಯಬಹುದು.

2, ಉಷ್ಣವಾಹಕಗಳು ಮತ್ತು ಅವಾಹಕಗಳಿಗೆ ತಲಾ ಎರಡು ಉದಾಹರಣೆ ನೀಡಿ.
ಉಷ್ಣವಾಹಕಗಳು……. ಕಬ್ಬಿಣ, ತಾಮ್ರ
ಅವಹಕಗಳು………….. ಪ್ಲಾಸ್ಟಿಕ್, ಒಣಗಿದ ಮರ.

13. ಬಿಟ್ಟ ಸ್ಥಳಗಳನ್ನು ತುಂಬಿ

(ಎ) ವಸ್ತುವಿನ ಉಷ್ಣತೆಯ ಮಟ್ಟವನ್ನು ನಿರ್ಧರಿಸುವುದು ಅದರ ತಾಪ.

(ಬಿ) ಕುದಿಯುವ ನೀರಿನ ತಾಪವನ್ನು ವೈದ್ಯಕೀಯ ತಾಪಮಾಪಕದಿಂದ ಅಳೆಯಲು ಸಾಧ್ಯವಿಲ್ಲ.

(ಸಿ) ತಾಪವನ್ನು ಡಿಗ್ರಿ    ಸೆಲ್ಸಿಯಸ್      ನಿಂದ ಅಳೆಯುವರು.

(ಡಿ) ಉಷ್ಣವು ಪ್ರಸಾರವಾಗಲು ಯಾವುದೇ ಮಾಧ್ಯಮದ ಅಗತ್ಯವಿಲ್ಲದ ವಿಧಾನ ಉಷ್ಣ ವಿಕಿರಣ.

(ಇ) ಬಿಸಿ ಹಾಲಿನ ಲೋಟದಲ್ಲಿ ಅದ್ದಿದ ಒಂದು ತಣ್ಣನೆಯ ಸ್ಟೀಲ್‌ ಚಮಚ ತನ್ನ ಇನ್ನೊಂದು ತುದಿಗೆ ಉಷ್ಣ ಪ್ರಸಾರ ಮಾಡುವ ವಿಧಾನ ಉಷ್ಣ ವಹನ.

(ಎಫ್) ತಿಳಿಯಾದ ಬಣ್ಣದ ಬಟ್ಟೆಗಳಿಗಿಂತ ದಟ್ಟವಾದ ಬಣ್ಣದ ಬಟ್ಟೆಗಳು ಹೆಚ್ಚು ಉಷ್ಣವನ್ನು ಹೀರುವ ಬಟ್ಟೆಗಳು ಬಣ್ಣದ್ದಾಗಿರುತ್ತವೆ.

4. ಈ ಕೆಳಗಿನವುಗಳನ್ನು ಹೊಂದಿಸಿ

(1) ನೆಲಗಾಳಿ ಬೀಸುವ ಕಾಲ…………… ರಾತ್ರಿ

(ii) ಕಡಲ್ಗಾಳಿ ಬೀಸುವ ಕಾಲ…………. ಹಗಲು

(iii) ದಟ್ಟವಾದ ಬಣ್ಣದ ಬಟ್ಟೆಗಳನ್ನು ತೊಡಲು ಇಚ್ಛಿಸುವ ಕಾಲ……. ಚಳಿಗಾಲ

(iv) ತಿಳಿಯಾದ ಬಣ್ಣದ ಬಟ್ಟೆಗಳನ್ನು  ತೊಡಲು ಇಚ್ಚಿಸುವ ಕಾಲ……… ಬೇಸಿಗೆಕಾಲ

5. ಚಳಿಗಾಲದಲ್ಲಿ ಒಂದೇ ಪದರದ ದಪ್ಪ ಬಟ್ಟೆಯನ್ನು ಧರಿಸುವುದಕ್ಕಿಂತ ಹಲವು ಪದರುಗಳ ಬಟ್ಟೆ ಧರಿಸುವುದು ನಮ್ಮನ್ನು ಬೆಚ್ಚಗೆ ಇಡುತ್ತದೆ ಏಕೆ? ಚರ್ಚಿಸಿ.

ಹಲವು  ಪದರುಗಳ ಬಟ್ಟೆಗಳ ನಡುವೆ ಗಾಳಿ ಸೇರಿರುತ್ತದೆ. ಗಾಳಿಯು ಅವಾಹಕವಾದರಿಂದ ಅದು ಹೊರಗಿನ ಚಳಿಯನ್ನು ಒಳಗೆ ಬಿಡುವುದಿಲ್ಲ ಮತ್ತು ದೇಹದ ಶಾಖವನ್ನು ಹೊರಗೆ ಬಿಡುವುದಿಲ್ಲ ಹಾಗಾಗಿ ಹಲವು ಪದರುಗಳ ಬಟ್ಟೆ ಧರಿಸುವುದು ನಮ್ಮನ್ನು ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತದೆ.

16. ಚಿತ್ರ 4,13ನ್ನು ನೋಡಿ. ವಹನ, ಸಂವಹನ ಮತ್ತು ವಿಕಿರಣದಿಂದ ಉಷ್ಣ ಪ್ರಸಾರವಾಗುತ್ತಿದೆ ಗುರುತು ಮಾಡಿ.

(i) ಬರ್ನರ್‌ನಿಂದ ಪ್ಯಾನ್‌ಗೆ ಶಾಖದ ವರ್ಗಾವಣೆ ವಿಕಿರಣದ ಮೂಲಕ.
(ii) ಶಾಖವನ್ನು ಪ್ಯಾನ್‌ನಿಂದ ನೀರಿಗೆ ವರ್ಗಾಯಿಸುವುದು ವಹನದ ಮೂಲಕ.
(iii) ನೀರಿನೊಳಗೆ ಶಾಖದ ವರ್ಗಾವಣೆಯು ಸಂವಹನದ ಮೂಲಕ.

7. ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಮನೆಗಳ ಹೊರಗೋಡೆಗಳಿಗೆ ಬಿಳಿ ಬಣ್ಣ ಬಳಿಯುವುದು. ಸೂಕ್ತ. ವಿವರಿಸಿ.

ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಹೆಚ್ಚು ಉಷ್ಣವು ಮನೆಯೊಳಗೆ ಬಾರದಂತೆ ತಡೆಯಬೇಕಾಗಿರುತ್ತದೆ. ಬಿಳಿ ಬಣ್ಣವು ಉಷ್ಣವನ್ನು ಹೀರಿಕೊಳ್ಳದೆ ಉಷ್ಣವನ್ನು ಪ್ರತಿಫಲಿಸುತ್ತದೆ.ಆದರೆ ದಟ್ಟವಾದ ಬಣ್ಣವು ಉಷ್ಣವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಬಿಳಿಯ ಬಣ್ಣವನ್ನು ಬಳಿಯುವುದರಿಂದ ಗೋಡೆಗಳು ಹೆಚ್ಚು ಬಿಸಿಯಾಗದೆ ಮನೆಗಳು ತಂಪಾಗಿರುತ್ತವೆ. ಆದ್ದರಿಂದ ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಗೋಡೆಗಳಿಗೆ ಬಿಳಿಯ ಬಣ್ಣವನ್ನು ಬಳಿಯುತ್ತಾರೆ.

8. 30°Cನ ಒಂದು ಲೀಟರ್ ನೀರನ್ನು 50°C ನ ಒಂದು ಲೀಟರ್ ನೀರಿನೊಂದಿಗೆ ಬೆರೆಸಿದೆ. ಈ ಸಂದರ್ಭದಲ್ಲಿ ಮಿಶ್ರಣದ ತಾಪ ಎಷ್ಟಿರುತ್ತದೆ?

(ಎ) 80°C

(ಬಿ) 50°C ಗಿಂತ ಹೆಚ್ಚು, 80°C ಗಿಂತ ಕಡಿಮೆ

(ಸಿ) 20°C

(ಡಿ) 30°C ನಿಂದ 50°C ನಡುವೆ.

ಉತ್ತರ (ಡಿ) 30°C ನಿಂದ 50°C ನಡುವೆ.

9. 40°C ನ ಒಂದು ಕಬ್ಬಿಣದ ಗುಂಡನ್ನು 40°C ನ ನೀರಿರುವ ಪಾತ್ರೆಗೆ ಹಾಕಿದರೆ ಉಷ್ಣವು

(ಎ) ಕಬ್ಬಿಣದ ಗುಂಡಿನಿಂದ ನೀರಿಗೆ ಹರಿಯುತ್ತದೆ.

(ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.

(ಸಿ) ನೀರಿನಿಂದ ಕಬ್ಬಿಣದ ಗುಂಡಿಗೆ ಹರಿಯುತ್ತದೆ.

(ಡಿ) ಎರಡರ ತಾಪವೂ ಹೆಚ್ಚಾಗುತ್ತದೆ.

ಉತ್ತರ: (ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.

10. ಮರದ ಚಮಚವನ್ನು ಒಂದು ಕಪ್ ಐಸ್‌ಕ್ರೀಮ್‌ನಲ್ಲಿ ಅದ್ದಿದಾಗ ಅದರ ಇನ್ನೊಂದು ತುದಿ

(ಎ) ವಹನ ಕ್ರಿಯೆಯಿಂದ ತಣ್ಣಗಾಗುತ್ತದೆ.

(ಬಿ) ಸಂವಹನ ಕ್ರಿಯೆಯಿಂದ ತಣ್ಣಗಾಗುತ್ತದೆ;

(ಸಿ) ವಿಕಿರಣ ಕ್ರಿಯೆಯಿಂದ ತಣ್ಣಗಾಗುತ್ತದೆ.

(ಡಿ) ತಣ್ಣಗಾಗುವುದಿಲ್ಲ.

ಉತ್ತರ: (ಡಿ) ತಣ್ಣಗಾಗುವುದಿಲ್ಲ.

II. ಸಾಮಾನ್ಯವಾಗಿ ಕಲೆರಹಿತ ಉಕ್ಕಿನ (stainless steel) ಬಾಣಲೆಗಳಿಗೆ ತಾಮ್ರದ ತಳ ಕಟ್ಟುವರು, ಇದಕ್ಕೆ ಕಾರಣ

(ಎ) ತಾಮ್ರದ ತಳವು ಬಾಣಲೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.

(ಬಿ) ಇಂತಹ ಬಾಣಲೆಗಳು ಬಣ್ಣ ಬಣ್ಣವಾಗಿ ಕಾಣಿಸುತ್ತವೆ.

(ಸಿ) ತಾಮ್ರವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.

(ಡಿ) ಕಲೆರಹಿತ ಉಕ್ಕಿಗಿಂತ ತಾಮ್ರವನ್ನು ಸ್ವಚ್ಛಗೊಳಿಸುವುದು ಸುಲಭ,

ಉತ್ತರ: (ಸಿ) ತಾಮ್ರವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೇಷ್ಠ ಕವಿ ಸರ್ವಜ್ಞ

  ಜನನ ಮತ್ತು ಬಾಲ್ಯ   ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ . ಇದು ಈಗ ಸರ್ವಜ್ಞನ ಅಬಲೂರು ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂ...